ಸ್ಲೆಡ್ಜಿಂಗ್‌ಗೆ ತಿರುಗೇಟು: ಉಸ್ಮಾನ್ ಖವಾಜರನ್ನು ಕಿಚಾಯಿಸಿದ ರಿಷಬ್ ಪಂತ್, ವಿಡಿಯೋ ವೈರಲ್!
ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಸ್ಲೆಡ್ಜಿಂಗ್ ಮಾಡಿದ್ದು ಇದಕ್ಕೆ ಪ್ರತಿಯಾಗಿ ರಿಷಬ್ ಆಸೀಸ್ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜರಿಗೆ ಸ್ಲೆಡ್ಜಿಂಗ್ ಮಾಡಿದ್ದಾರೆ...

Published On :
ಅಡಿಲೇಡ್: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಸ್ಲೆಡ್ಜಿಂಗ್ ಮಾಡಿದ್ದು ಇದಕ್ಕೆ ಪ್ರತಿಯಾಗಿ ರಿಷಬ್ ಆಸೀಸ್ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜರಿಗೆ ಸ್ಲೆಡ್ಜಿಂಗ್ ಮಾಡಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾ ಸ್ಲೆಡ್ಜಿಂಗ್ ಮಾಡದೆ ಇರಲು ತೀರ್ಮಾನಿಸಿತ್ತು. ಅಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಶಾಂತಿಯುತ ಕ್ರಿಕೆಟ್ ಆಡುತ್ತೇವೆ ಎಂದಿದ್ದರು. ಆದರೆ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ ರಿಷಬ್ ಪಂತ್ ರನ್ನು ಮಾತನಾಡಿಸಿ ಸ್ಲೆಡ್ಜಿಂಗ್ ಮಾಡಲು ಮುಂದಾಗಿದ್ದರು. ಇದಕ್ಕೆ ರಿಷಬ್ ಪ್ರತಿಕ್ರಿಯಿಸಿದ ಮುಂದೆ ಸಾಗಿದ್ದರು.
ಇನ್ನು ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಜಿಗುಟು ಆಟ ಪ್ರದರ್ಶಿಸುತ್ತಿದ್ದ ಉಸ್ಮಾನ್ ಖವಾಜರನ್ನು ರಿಷಬ್ ಪಂತ್ ಕಿಚಾಯಿಸಿದ್ದು ಇದು ಮೈಕ್ರೋಫೋನ್ ನಲ್ಲಿ ಸ್ಪಷ್ಟವಾಗಿ ಕೇಳಿದೆ.
ಖವಾಜರನ್ನು ಕಿಚಾಯಿಸುತ್ತಾ ರಿಷಬ್ ಪಂತ್ ಎಲ್ಲರೂ ಚೇತೇಶ್ವರ ಪೂಜಾರ ಆಗಲು ಸಾಧ್ಯವಿಲ್ಲ ಇಲ್ಲಿ ಎಂದಿದ್ದಾರೆ. ಇನ್ನು ಸ್ಲೆಡ್ಜಿಂಗ್ ಮಾಡಿ ಆಟ ಗೆಲ್ಲುವ ಚಾಣಾಕ್ಷತನ ಹೊಂದಿದ್ದ ಆಸ್ಟ್ರೇಲಿಯನ್ನರಿಗೆ ರಿಷಬ್ ಸ್ಲೆಡ್ಜಿಂಗ್ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Adelaide Testಅಡಿಲೇಡ್ ಟೆಸ್ಟ್ಸ್ಲೆಡ್ಜಿಂಗ್Usman Khawajaಉಸ್ಮಾನ್ ಖವಾಜRishabh PantCricket Offbeatಕ್ರಿಕೆಟ್ ಸ್ವಾರಸ್ಯsledgeರಿಷಬ್ ಪಂತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


