ರಿಷಬ್ ಮುಂದೆ ನಡೆಯಲ್ಲ ಆಸೀಸ್ ಸ್ಲೆಡ್ಜಿಂಗ್; ಪಂತ್ ಕೊಟ್ಟ ಪ್ರತ್ಯುತ್ತರ, ವಿಡಿಯೋ ವೈರಲ್!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸ್ಲೆಡ್ಜಿಂಗ್ ಮಾಡಿ ಚಚ್ಚಿಸಿಕೊಳ್ಳುವುದಕ್ಕೆ ಹೋಗದ ಆಸ್ಟ್ರೇಲಿಯಾ ಬೌಲರ್ ಗಳು ಇದೀಗ ಯುವ ಆಟಗಾರ ರಿಷಬ್ ಪಂತ್ ಗೆ ಸ್ಲೆಡ್ಜಿಂಗ್ ಮಾಡಿದ್ದು ಇದಕ್ಕೆ ಪಂತ್ ತಕ್ಕ...

Published On :
ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸ್ಲೆಡ್ಜಿಂಗ್ ಮಾಡಿ ಚಚ್ಚಿಸಿಕೊಳ್ಳುವುದಕ್ಕೆ ಹೋಗದ ಆಸ್ಟ್ರೇಲಿಯಾ ಬೌಲರ್ ಗಳು ಇದೀಗ ಯುವ ಆಟಗಾರ ರಿಷಬ್ ಪಂತ್ ಗೆ ಸ್ಲೆಡ್ಜಿಂಗ್ ಮಾಡಿದ್ದು ಇದಕ್ಕೆ ಪಂತ್ ತಕ್ಕ ತಿರುಗೇಟು ನೀಡಿದ್ದಾರೆ.
ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದು ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ರಿಷಬ್ ಬ್ಯಾಟಿಂಗ್ ನಡೆಸುತ್ದಿದ್ದರು. ಆದರೆ ಈ ವೇಳೆ ಪಂತ್ ಬಳಿ ಬಂದ ಪ್ಯಾಟ್ ಮಾತನಾಡಲು ಯತ್ನಿಸಿ ಸ್ಲೆಡ್ಜಿಂಗ್ ಮಾಡಿದ್ದಾರೆ. ಆದರೆ ಪ್ಯಾಟ್ ಮಾತಿಗೆ ತಲೆ ಕೆಡಿಸಿಕೊಳ್ಳದ ಪಂತ್ ಬೌಲರ್ ಮಾತುಗಳನ್ನು ನಿರ್ಲಕ್ಷ್ಯ ಮಾಡಿ ಮುಂದೆ ಸಾಗಿದ್ದಾರೆ.
ಇನ್ನು ಪಂತ್ ರನ್ನು ಸ್ಲೆಡ್ಜಿಂಗ್ ಮಾಡಿದ ಆಸೀಸ್ ಬೌಲರ್ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವ ಆಟಗಾರರನ್ನು ಕೆಣಕ್ಕಿ ಅವರ ಗಮನವನ್ನು ಬೇರೆಡೆ ಸೆಳೆದು ಅವರನ್ನು ಬಹುಬೇಗ ಔಟ್ ಮಾಡುವುದಕ್ಕೆ ಆಸ್ಟ್ರೇಲಿಯಾ ಬೌಲರ್ ಗಳು ಸ್ಲೆಡ್ಜಿಂಗ್ ಗೆ ಮುಂದಾಗುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾAustraliaTeam IndiaAdelaide Testಅಡಿಲೇಡ್ ಟೆಸ್ಟ್ಸ್ಲೆಡ್ಜಿಂಗ್Rishabh PantCricket Offbeatಕ್ರಿಕೆಟ್ ಸ್ವಾರಸ್ಯsledgeರಿಷಬ್ ಪಂತ್Pat Cumminsಪ್ಯಾಟ್ ಕಮಿನ್ಸ್ಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


