'ಭಯಭೀತ ಬಾವಲಿಗಳು'; ಟೀಂ ಇಂಡಿಯಾ ಹೀಗಳೆದ ಆಸಿಸ್ ಮಾಧ್ಯಮಗಳ ತರಾಟೆಗೆ ತೆಗೆದುಕೊಂಡ ಆಸ್ಟ್ರೇಲಿಯನ್ನರು!
ಅಸ್ಚ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಸಿಸ್ ಮಾಧ್ಯಮಗಳು ತಮ್ಮ ನೀಚ ಬುದ್ದಿಯ ಪ್ರದರ್ಶನ ಮಾಡಿದ್ದು, ಟೀಂ ಇಂಡಿಯಾ ಆಟಗಾರರನ್ನು ಭಯಭೀತ ಬಾವಲಿಗಳು ಎಂದು ಟೀಕಿಸಿವೆ.

Published On :
ಅಡಿಲೇಡ್: ಅಸ್ಚ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಸಿಸ್ ಮಾಧ್ಯಮಗಳು ತಮ್ಮ ನೀಚ ಬುದ್ದಿಯ ಪ್ರದರ್ಶನ ಮಾಡಿದ್ದು, ಟೀಂ ಇಂಡಿಯಾ ಆಟಗಾರರನ್ನು ಭಯಭೀತ ಬಾವಲಿಗಳು ಎಂದು ಟೀಕಿಸಿವೆ.
ಮೊದಲವ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಅಡಿಲೇಡ್ ಕಾಲಿಟ್ಟ ಸುದ್ದಿ ಪ್ರಕಟಿಸುವ ಭರದಲ್ಲಿ ಆಸ್ಟ್ರೇಲಿಯಾದ ಪ್ರಮುಖ ದೈನಿಕವೊಂದು ತನ್ನ ಸುದ್ದಿಗೆ 'The Scaredy Bats' (ಭಯಭೀತ ಬಾವಲಿಗಳು) ಎಂದು ಶೀರ್ಷಿಕೆ ನೀಡುವ ಮೂಲಕ ತನ್ನ ಸಣ್ಣ ತನವನ್ನು ಪ್ರದರ್ಶನ ಮಾಡಿದೆ.
ಪ್ರಸ್ತುತ ಈ ದೊಡ್ಡ ಪತ್ರಿಕೆಯ ಸಣ್ಣ ತನವನ್ನು ಸ್ವತಃ ಆಸ್ಟ್ರೇಲಿಯನ್ನರೇ ವಿರೋಧಿಸಿದ್ದು, ಟ್ವಿಟರ್ನಲ್ಲಿ ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಆಸ್ಟ್ರೇಲಿಯನ್ನರು ಈ ರೀತಿಯ ನಡೆ ದೇಶಕ್ಕೆ ಅವಮಾನ ತರುತ್ತದೆ ಎಂದು ಹೇಳಿದ್ದಾರೆ.
ತಮ್ಮದೇ ದೇಶದ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಬೆನ್ಕ್ರಾಫ್ಟ್ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ದೇಶಕ್ಕೇ ಕಳಂಕ ತಂದಿರುವ ವಿಚಾರ ಹಸಿಯಾಗಿರುವಾಗಲೇ ಅದೇ ನಾಡಿನ ಮಾಧ್ಯಮ, ಜಂಟಲ್ಮ್ಯಾನ್ ಆಟಕ್ಕೆ ಘನತೆ ತಂದಿರುವ ದೇಶವನ್ನು ಹೀಗಳೆಯುವ ಮೂಲಕ ತನ್ನ ಸಣ್ಣಬುದ್ಧಿ ಪ್ರದರ್ಶನ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಭಾರತTwitterಆಸ್ಟ್ರೇಲಿಯಾAustraliaಟ್ವಿಟರ್ಅಡಿಲೇಡ್Australian mediaಆಸ್ಟ್ರೇಲಿಯಾ ಮಾಧ್ಯಮAdelade
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


