ಕ್ರಿಕೆಟ್

ಆರು ಎಸೆತದಲ್ಲಿ ಆರು ಸಿಕ್ಸರ್, ಒಂದೇ ಇನ್ನಿಂಗ್ಸ್ ನಲ್ಲಿ ದ್ವಿಶತಕ: ಕ್ರಿಕೆಟ್ ನಲ್ಲೊಂದು ಅತಿ ಅಪರೂಪದ ದಾಖಲೆ

ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರನೋರ್ವ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲದೇ ದ್ವಿಶತಕ ಕೂಡ ಸಿಡಿಸಿ ಅತಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.

ಆರು ಎಸೆತದಲ್ಲಿ ಆರು ಸಿಕ್ಸರ್, ಒಂದೇ ಇನ್ನಿಂಗ್ಸ್ ನಲ್ಲಿ ದ್ವಿಶತಕ: ಕ್ರಿಕೆಟ್ ನಲ್ಲೊಂದು ಅತಿ ಅಪರೂಪದ ದಾಖಲೆ
ದಾಖಲೆ ನಿರ್ಮಿಸದ ಆಲಿವರ್ ಡೇವಿಸ್
Published On :
ಸಿಡ್ನಿ: ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರನೋರ್ವ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲದೇ ದ್ವಿಶತಕ ಕೂಡ ಸಿಡಿಸಿ ಅತಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.
ಚುಟುಕು ಕ್ರಿಕೆಟ್ ನಲ್ಲಿ 6 ಎಸೆತಕ್ಕೆ 6 ಸಿಕ್ಸರ್ ಸಿಡಿಸಿ ಟೀಂ ಇಂಡಿಯಾದ ಯುವರಾಜ್ ಸಿಂಗ್ ದಾಖಲೆ ನಿರ್ಮಿಸಿ ಅಭಿಮಾನಿಗಳ ಮನಗೆದ್ದಿದ್ದರು. ಸದ್ಯ ಇದೇ ಮಾದರಿಯಲ್ಲಿ ಆಸೀಸ್ ನ ಅಂಡರ್ 19 ತಂಡದ ಉದಯೋನ್ಮುಖ ಆಟಗಾರ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸುವುದರೊಂದಿಗೆ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಅಂಡರ್ 19 ಟೂರ್ನಿಯಲ್ಲಿ ನ್ಯೂ ಸೌಥ್ ವೇಲ್ಸ್ ಮೆಟ್ರೋ ತಂಡದ ಆಲಿವರ್ ಡೇವಿಸ್ ಈ ಸಾಧನೆ ಮಾಡಿದ್ದು, ನಾರ್ಥನ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೇವಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಪಂದ್ಯದಲ್ಲಿ 115 ಎಸೆತಗಳನ್ನು ಎದುರಿಸಿದ ಡೇವಿಸ್ ಬರೊಬ್ಬರಿ 207 ರನ್ ಸಿಡಿಸಿದರು. ಆ ಮೂಲಕ ಡೇವಿಸ್ ಅಂಡರ್ 19 ಚಾಂಪಿಯನ್ ಶಿಪ್ ನಲ್ಲಿ ದ್ವಿಶಕತ ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಆರಂಭದಲ್ಲಿ ರಕ್ಷಣಾತ್ಮಕ ಆಟವಾಡಿದ ಡೇವಿಸ್ 74 ಎಸೆತಗಳಲ್ಲಿ ಶತಕ ಪೂರೈಸಿದರು. ಆ ಬಳಿಕ ಬಿರುಸಿನ ಆಟವಾಡಿದ ಅವರು ಕೇವಲ 39 ಎಸೆತಗಳಲ್ಲಿ 100 ರನ್ ಸಿಡಿಸಿದರು. ಪಂದ್ಯದ 40ನೇ ಓವರ್ ನಲ್ಲಿ ಸತತ 6 ಎಸೆತಗಳಲ್ಲೂ ಡೇವಿಸ್ ಸಿಕ್ಸರ್ ಸಿಡಿಸಿದ್ದು ವಿಶೇಷವಾಗಿತ್ತು. ಒಟ್ಟಾರೆ ಪಂದ್ಯದಲ್ಲಿ ಡೇವಿಸ್ 14 ಬೌಂಡರಿ, 17 ಸಿಕ್ಸರ್ ಸಿಡಿಸಿ ಮಿಂಚಿದರು. ಈ ಪಂದ್ಯವನ್ನು ನ್ಯೂ ಸೌಥ್ ವೇಲ್ಸ್ ತಂಡ 168 ರನ್ ಅಂತರದಲ್ಲಿ ಗೆಲುವು ಸಾಧಿಸಿತು.
ಈ ಮೊದಲು ಯುವರಾಜ್ ಸಿಂಗ್ ಸೇರಿದಂತೆ 10 ಮಂದಿಯಿಂದ ಒಂದೇ ಓವರಿನ 6 ಬಾಲಿಗೆ 6 ಸಿಕ್ಸರ್ ಸಿಡಿಸಿ ಸಾಧನೆ ಮಾಡಿದ್ದು, ಪ್ರಥಮ ದರ್ಜೆ ಪಂದ್ಯದಲ್ಲಿ ರವಿಶಾಸ್ತ್ರಿ, ಜೋಡರ್ನ್ ಕ್ಲಾಕ್, ರೋಸ್ ವೈಟ್ಲಿ, ರವೀಂದ್ರ ಜಡೇಜಾ, ವಿಂಡೀಸ್ ನ ಸರ್ ಗ್ಯಾರ್ಫೀಲ್ಡ್ ಸೋಬರ್ಸ್, ಆಸೀಸ್ ನ ಮಾರ್ಕಸ್ ಸ್ಟೋಯಿನಿಸ್ ಹಾಗೂ ಟಿ20 ಯಲ್ಲಿ ಯುವರಾಜ್ ಸಿಂಗ್, ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಅಭ್ಯಾಸ ಪಂದ್ಯದಲ್ಲಿ ಕೀರೆನ್ ಪೋಲಾರ್ಡ್, ಜೂನಿಯರ್ ಕ್ರಿಕೆಟಿನಲ್ಲಿ ಶಾದೂರ್ಲ್ ಠಾಕೂರ್ ಈ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.