ಕ್ರಿಕೆಟ್

ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ದೊಡ್ಡ ಶತ್ರು: ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳೋದೇನು?

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದ್ದು ಟೀಂ ಇಂಡಿಯಾಗೆ ಇದೊಂದು ಸುವರ್ಣವಕಾಶ ಎಂದು ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳಿದ್ದಾರೆ.

ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ದೊಡ್ಡ ಶತ್ರು: ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳೋದೇನು?
ವಿರಾಟ್ ಕೊಹ್ಲಿ-ಸ್ಟೀವ್ ವಾ
Published On :
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದ್ದು ಟೀಂ ಇಂಡಿಯಾಗೆ ಇದೊಂದು ಸುವರ್ಣವಕಾಶ ಎಂದು ಆಸೀಸ್ ಮಾಜಿ ನಾಯಕ ಸ್ಟೀವ್ ವಾ ಹೇಳಿದ್ದಾರೆ. 
ಭಾರತಕ್ಕೆ ಇದು ಗಮನಾರ್ಹ ಅವಕಾಶವೆಂದು ನಾನು ಭಾವಿಸುತ್ತೇನೆ. ದೀರ್ಘಕಾಲದ ಪ್ರವಾಸಕ್ಕೆ ಉಭಯ ತಂಡಗಳು ಸಿದ್ಧವಾಗಿವೆ. ಇದು ನಿಜವಾಗಿಯೂ ನಿಕಟ ಸರಣಿಯೆಂದು ನಾನು ಭಾವಿಸುತ್ತೇನೆ ಎಂದರು.
ಆಸ್ಟ್ರೇಲಿಯ ಬೌಲರ್ ಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೊಡ್ಡ ಶತ್ರು. ತಮ್ಮ ನೆಲದಲ್ಲಿ ವಿರಾಟ್ ಕೊಹ್ಲಿ ಸ್ಫೋಟಿಸದಂತೆ ನೋಡಿಕೊಳ್ಳಬೇಕಿದೆ. ವಿರಾಟ್ ಕೊಹ್ಲಿ ಅದ್ಭುತ ಆಟಗಾರ ಹಾಗೂ ಅದ್ಭತ ಅವಕಾಶಗಳನ್ನು ಬಳಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಅಂದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಥವಾ ಬ್ರಿಯಾನ್ ಲಾರಾರಂತೆ. ದೊಡ್ಡ ದೊಡ್ಡ ಸರಣಿಗಳಲ್ಲಿ ತಮ್ಮ ಕೌಶಲ್ಯವನ್ನು ತೋರಲು ಯತ್ನಿಸುತ್ತಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.