ಕ್ರಿಕೆಟ್

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿದ್ದಾರೆ.

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ
ಪೂಜಾರಾ ಶತಕ ಸಂಭ್ರಮ
Published On :
ಸೌಥ್ಯಾಂಪ್ಟನ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿದ್ದಾರೆ.
ಭಾರತೀಯ ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್ ನಡುವೆಯೇ ಏಕಾಂಗಿ ಹೋರಾಟ ನಡೆಸಿದ ಪೂಜಾರ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಒಟ್ಟು 210 ಎಸೆತಗಳಲ್ಲಿ 101 ರನ್ ಸಿಡಿಸಿದ ಬಲಗೈ ಬ್ಯಾಟ್ಸಮನ್ ಪೂಜಾರಾ ತಮ್ಮ ಟೆಸ್ಟ್ ವೃತ್ತಿ ಜೀವನದ 15 ಶತಕ ಸಿಡಿಸಿದರು. ಪೂಜಾರ ಅವರ ಇನ್ನಿಂಗ್ಸ್ ನಲ್ಲಿ ಒಟ್ಟು 11 ಬೌಂಡರಿಗಳು ಸೇರಿದ್ದವು. 
ಭಾರತಕ್ಕೆ ಅಲ್ಪ ಮುನ್ನಡೆ, ಮೊಯಿನ್ ಅಲಿ ದಾಳಿಗೆ ತತ್ತರಿಸಿದ ಭಾರತ
ಇನ್ನು ಇಂಗ್ಲೆಂಡ್ ತಂಡದ ಬೌಲರ್ ಮೊಯಿನ್ ಅಲಿ ದಾಳಿಗೆ ತತ್ತರಿಸಿದ ಭಾರತ ಈಗಾಗಲೇ 9 ವಿಕೆಟ್ ಕಳೆದುಕೊಂಡಿದೆ. ಆದರೂ ಪೂಜಾರಾ ಅವರ ಶತಕದ ನೆರವಿನಿಂದ ಭಾರತ ಅಲ್ಪ ಮುನ್ನಡೆ ಸಾಧಿಸಿದ್ದು, ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತ್ತು. ಅಂತೆಯೇ 24 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಪ್ರಸ್ತುತ 124 ರನ್ ಸಿಡಿಸಿರುವ ಪೂಜಾರ ಮತ್ತು ಜಸ್ ಪ್ರೀತ್ ಬುಮ್ರಾ ಆಟವಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.