38 ಟೆಸ್ಟ್ ಪಂದ್ಯದಲ್ಲಿ 38 ಬದಲಾವಣೆ ಯಾಕೋ ಅತಿಯಾಯ್ತು, ಕೊಹ್ಲಿ ನಾಯಕತ್ವಕ್ಕೆ 'ಭಜ್ಜಿ' ಕೆಂಡ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕೆಂಡಕಾರಿದ್ದಾರೆ...

Published On :
ನಾಟಿಂಗ್ ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕೆಂಡಕಾರಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ 38 ಟೆಸ್ಟ್ ಪಂದ್ಯಗಳಲ್ಲಿ 38 ಬದಲಾವಣೆಗಳನ್ನು ಮಾಡಲಾಗಿದ್ದು ಇದು ಯಾಕೋ ಅತಿಯಾಯ್ತು ಎಂದು ಹರ್ಭಜನ್ ಸಿಂಗ್ ಭಾವಿಸಿದರೂ ಕೊಹ್ಲಿ ಪಡೆ ಉತ್ತಮ ಫಲಿತಾಂಶ ನೀಡುವವರೆಗೂ ಇದು ಅಪ್ರಸ್ತುತವಾಗಿರುತ್ತದೆ ಎಂದು ಹೇಳಿದ್ದಾರೆ.
ಟೆಸ್ಟ್ ನಲ್ಲಿ ಬದಲಾವಣೆಗಳನ್ನು ಮಾಡುವುದು ಸಹಜ. ಆದರೆ ಕೊಹ್ಲಿ ನಾಯಕತ್ವದಲ್ಲಿ ಸ್ವಲ್ಪ ಹೆಚ್ಚಾಯ್ತು. ಪ್ರತಿ ನಾಯಕನೂ ವಿಭಿನ್ನ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದು ಪ್ರತಿಯೊಂದು ತಂಡದಲ್ಲೂ ಡೈನಾಮಿಕ್ ಬದಲಾವಣೆಯನ್ನು ತರುತ್ತದೆ.
ಟೆಸ್ಟ್ ತಂಡದಲ್ಲಿ ಮಾಡಿದ್ದ ಬದಲಾವಣೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಸಹಾಯವಾಗಿತ್ತು. ಅದೇ ರೀತಿಯ ಸ್ಟ್ರಾಟರ್ಜಿ ಇಂಗ್ಲೆಂಡ್ ನೆಲದಲ್ಲೂ ಮಾಡಬೇಕಿದೆ. ನಾಯಕನಿಗೆ ತಮ್ಮ ನಿರ್ಧಾರದಲ್ಲಿ ನಂಬಿಕೆ ಇದ್ದರೆ ಈ ಸಲಹೆಯನ್ನು ನಿರ್ವಹಣ ಮಂಡಳಿಯೂ ಒಪ್ಪಿಕೊಳ್ಳುತ್ತದೆ ಮತ್ತು ಆಟಗಾರರೂ ಅದನ್ನು ಸ್ವೀಕರಿಸುತ್ತಾರೆ. ಆಗ ನಾವು ನೀವು ಯೋಚಿಸುವುದು ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಒಂದು ಪಂದ್ಯವನ್ನು ಗೆದ್ದಿದ್ದು ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆದ್ದಿದೆ. ಭಾರತ ಟೆಸ್ಟ್ ಸರಣಿ ಗೆಲ್ಲಬೇಕಾದರೆ ಇಳಿದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿHarbhajan Singhಹರ್ಭಜನ್ ಸಿಂಗ್ಇಂಗ್ಲೆಂಡ್England
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


