ನಿಮ್ಮ ಕೊಹ್ಲಿ ಎಲ್ಲಿ? ನಮ್ಮ ಕಡೆ ಆ್ಯಂಡರ್ಸನ್ ಇದ್ದಾನೆ: ಕೊಹ್ಲಿಯನ್ನು ಕಿಚಾಯಿಸಿ ಇಂಗ್ಲೆಂಡ್ ಅಭಿಮಾನಿಗಳ ದುರ್ವತನೆ!
ಕ್ರೀಡಾಂಗಣದ ಹೊರಗಡೆ ಇಂಗ್ಲೆಂಡ್ ಅಭಿಮಾನಿಗಳು ಎಲ್ಲಿ ನಿಮ್ಮ ನಾಯಕ ವಿರಾಟ್ ಕೊಹ್ಲಿ... ನಮ್ಮ ಕಡೆ ಜೇಮ್ಸ್ ಆ್ಯಂಡರ್ಸನ್ ಇದ್ದಾನೆ ಎಂದು ಘೋಷಣೆ ಕೂಗುತ್ತಾ ಕೊಹ್ಲಿಯನ್ನು...

Published On :
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಅನುಭವಿಸಿದ ನಂತರ ಕ್ರೀಡಾಂಗಣದ ಹೊರಗಡೆ ಇಂಗ್ಲೆಂಡ್ ಅಭಿಮಾನಿಗಳು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಕಿಚಾಯಿಸಿದ್ದಾರೆ.
ಕ್ರೀಡಾಂಗಣದ ಹೊರಗಡೆ ಇಂಗ್ಲೆಂಡ್ ಅಭಿಮಾನಿಗಳು ಎಲ್ಲಿ ನಿಮ್ಮ ನಾಯಕ ವಿರಾಟ್ ಕೊಹ್ಲಿ... ನಮ್ಮ ಕಡೆ ಜೇಮ್ಸ್ ಆ್ಯಂಡರ್ಸನ್ ಇದ್ದಾನೆ ಎಂದು ಘೋಷಣೆ ಕೂಗುತ್ತಾ ಕೊಹ್ಲಿಯನ್ನು ಇಂಗ್ಲೆಂಡ್ ಅಭಿಮಾನಿಗಳು ಕಿಚಾಯಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರು ಕ್ರೀಡಾಂಗಣದಿಂದ ಹೋಟೆಲ್ ಕಡೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಅನ್ನು ತಡೆ ಇಂಗ್ಲೆಂಡ್ ಅಭಿಮಾನಿಗಳು ಕೊಹ್ಲಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದ್ದರು. ಇನ್ನೇನು ಸೋಲುತ್ತೇವೆ ಎಂದು ಭಾವಿಸಿದ್ದ ಆಂಗ್ಲರು ಕೊನೆಯಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಗೆಲುವಿನ ಲಯಕ್ಕೆ ಮರಳಿದ್ದರು. ಎರಡು ಇನ್ನಿಂಗ್ಸ್ ನಲ್ಲಿ ಕೊಹ್ಲಿ 200 ರನ್ ಸಿಡಿಸಿ ಗಮನ ಸೆಳೆದಿದ್ದರು. ಇದೀಗ ಇಂಗ್ಲೆಂಡ್ ಅಭಿಮಾನಿಗಳು ದೃತಿಗೆಡುವಂತೆ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿಇಂಗ್ಲೆಂಡ್EnglandJames AndersonEdgbaston Testಎಡ್ಜ್ಬಾಸ್ಟನ್ ಟೆಸ್ಟ್ಜೇಮ್ಸ್ ಆ್ಯಂಡ್ರೂಸನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


