ಐಪಿಎಲ್ ಹಣಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್‍ನಲ್ಲಿ ಕಿತ್ತಾಟ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿ ಭಾರೀ ರೋಚಕತೆಯಿಂದ ಕೂಡಿದ್ದು ಇಂಗ್ಲೆಂಡ್ ನ 12 ಆಟಗಾರರು ಈ ಬಾರಿ ಕಣದಲ್ಲಿದ್ದಾರೆ...

Published On :
ಲಂಡನ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿ ಭಾರೀ ರೋಚಕತೆಯಿಂದ ಕೂಡಿದ್ದು ಇಂಗ್ಲೆಂಡ್ ನ 12 ಆಟಗಾರರು ಈ ಬಾರಿ ಕಣದಲ್ಲಿದ್ದಾರೆ.
ಆದರೆ ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ಐಪಿಎಲ್ ಹಣಕ್ಕಾಗಿ ಕಿತ್ತಾಟ ಶುರುವಾಗಿದೆ. ಐಪಿಎಲ್ ಗೆ ತಮ್ಮ ದೇಶಗಳ ಆಟಗಾರರನ್ನು ಕಳುಹಿಸುವ ವಿದೇಶಿ ಕ್ರಿಕೆಟ್ ಮಂಡಳಿಗಳಿಗೆ, ಆ ದೇಶದ ಆಟಗಾರರ ಗುತ್ತಿಗೆ ಮೌಲ್ಯದ ಶೇ.20ರಷ್ಟು ಮೊತ್ತವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪಾವತಿಸಲಿದೆ.
ಈ ವಿಚಾರಕ್ಕೆ ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ವಿವಾದ ಸೃಷ್ಟಿಯಾಗಿದೆ. ಆಟಗಾರರನ್ನು ಐಪಿಎಲ್ ಗೆ ಕಳುಹಿಸಿದ್ದಕ್ಕೆ ಕೌಂಟಿ ತಂಡಗಳಿಗೆ ಹಣ ಸೇರಬೇಕು, ಆದರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಎಲ್ಲಾ ಹಣವನ್ನು ತಾನೇ ಬಳಸಿಕೊಳ್ಳುತ್ತಿದೆ ಎಂದು ಸರ್ರೆ ಕೌಂಟಿ ತಂಡದ ನಿರ್ದೇಶಕ ಮಾಜಿ ಕ್ರಿಕೆಟಿಗ ಅಲೆಕ್ಸ್ ಸ್ಟೀವರ್ಟ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್IPL 2018ಐಪಿಎಲ್ 2018Alec StewartEngland Cricket BoardIPL Moneyಅಲೆಕ್ಸ್ ಸ್ಟೀವರ್ಟ್ಇಂಗ್ಲೆಂಡ್ ಕ್ರಿಕೆಟ್ ಮಂಡಳಿಐಪಿಎಲ್ ಹಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


