ಕ್ರಿಕೆಟ್

ಐಪಿಎಲ್ 2018: ಬೆಂಗಳೂರನ್ನು ಮಣಿಸಿದ ಕೋಲ್ಕತ್ತಾಗೆ ನಾಲ್ಕು ವಿಕೆಟ್ ಜಯ

ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ರಾಯಲ್​ ಛಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತ ನೈಟ್​ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ ನಾಲ್ಕು ವಿಕೆಟ್ ಗಳಿಂದ ಜಯ ಸಾಧಿಸಿದೆ.

ಐಪಿಎಲ್ 2018: ಬೆಂಗಳೂರನ್ನು ಮಣಿಸಿದ ಕೋಲ್ಕತ್ತಾಗೆ ನಾಲ್ಕು ವಿಕೆಟ್ ಜಯ
ನಿತೀಶ್ ರಾಣಾ ಬ್ಯಾಟಿಂಗ್ ಶೈಲಿ
Published On :
ಕೋಲ್ಕತ್ತಾ: ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ರಾಯಲ್​ ಛಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತ ನೈಟ್​ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ 4 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಮೊದಲಿಗೆ ಬ್ಯಾಟ್ ಮಾಡಿದ್ದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಕಲೆ ಹಾಕಿತ್ತು. ಬೆಂಗಳೂರಿನ ಪರವಾಗಿ ಬ್ರೆಂಡನ್​ ಮೆಕಲಮ್​(43), ವಿರಾಟ್​ ಕೊಹ್ಲಿ(31), ಎಬಿ ಡಿವಿಲಿಯರ್ಸ್​(44) ಹಾಗೂ ಮಂದೀಪ್​ ಸಿಂಗ್​ (37) ಉತ್ತಮ ರನ್ ಪೇರಿಸಿದ್ದರು. 
ಕೋಲ್ಕತ್ತಾದ ಬೌಲರ್ ಗಳಾದ ವಿನಯ್​ ಕುಮಾರ್​, ನಿತೀಶ್​​ ರಾಣ ತಲಾ ಎರಡು ವಿಕೆಟ್ ಕಬಳಿಸಿದರೆ ಪಿಯೂಷ್​ ಚಾವ್ಲ, ಮಿಚೆಲ್​ ಜಾನ್ಸನ್​ ಹಾಗೂ ಸುನೀಲ್​ ನರೇನ್​ ತಾವು ಒಂದೊಂದು ವಿಕೆಟ್ ಪಡೆದರು. 
ಬೆಂಗಳೂರು ತಂಡ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 18.5 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಸುನೀಲ್​ ನರೇನ್​ (50), ನಿತೀಶ್​ ರಾಣ(34) ಹಾಗೂ ದಿನೇಶ್​ ಕಾರ್ತಿಕ್​(35*)  ಅವರುಗಳು ಕೋಲ್ಕಾತ್ತಾ ತಂಡದ ಪರವಾಗಿ ಉತ್ತಮ ಪ್ರದರ್ಶ್ನ ನಿಡಿದ್ದಾರೆ.
ಆರ್​ಸಿಬಿ ಬೌಲರ್ ಕ್ರಿಸ್​ ವೋಕ್ಸ್​ 3 ವಿಕೆಟ್ ಪಡೆದು ಮಿಂಚಿದರೆ ಉಮೇಶ್​ ಯಾದವ್​ 2 ವಿಕೆಟ್​ ಉರುಳಿಸಲು ಸಮರ್ಥರಾದರು. ವಾಷಿಂಗ್ಟ್​ನ್​ ಸುಂದರ್​ 1 ವಿಕೆಟ್​ ಪಡೆದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 176/7 (20.0 ಓವರ್)
ಕೋಲ್ಕತ್ತಾ ನೈಟ್ ರಈಡರ್ಸ್ 177/6 (18.5 ಓವರ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.