ಕ್ರಿಕೆಟ್

ಕ್ರಿಕೆಟ್ ಮೈದಾನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕಿಸ್ತಾನ ಕ್ರಿಕೆಟಿಗ!

ಆಯ್ಕೆಗಾರರು ತನಗೆ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ ಎಂದು ಬೇಸತ್ತು ಪಾಕಿಸ್ತಾನದ ಕ್ರಿಕೆಟಿಗನೋರ್ವ ಸ್ಟೇಡಿಯಂನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕ್ರಿಕೆಟ್ ಮೈದಾನದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪಾಕಿಸ್ತಾನ ಕ್ರಿಕೆಟಿಗ!
ಸಂಗ್ರಹ ಚಿತ್ರ
Published On :
ಲಾಹೋರ್: ಆಯ್ಕೆಗಾರರು ತನಗೆ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ ಎಂದು ಬೇಸತ್ತು ಪಾಕಿಸ್ತಾನದ ಕ್ರಿಕೆಟಿಗನೋರ್ವ ಸ್ಟೇಡಿಯಂನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಪಾಕಿಸ್ತಾನದ ಪ್ರಥಮ ದರ್ಜೆ ಕ್ರಿಕೆಟ್ ನ ಆಟಗಾರ ಗುಲಾಮ್ ಹೈದರ್ ಅಬ್ಬಾಸ್ ಆತ್ಮಹತ್ಯೆಗೆ ಯತ್ನಿಸಿದ್ದು, ಪಾಕಿಸ್ತಾನದ ಲಾಹೋರ್ ಸಿಟಿ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಖೈದ್ ಇ ಅಜಾಮ್  ಟ್ರೋಫಿ ಪಂದ್ಯ ನಡೆಯುತ್ತಿದ್ದ ವೇಳೆ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಇದನ್ನು ಗಮನಿಸಿದ್ದು, ಕೂಡಲೇ ಹೈದರ್ ನನ್ನು ತಡೆದು ಸಿಬ್ಬಂದಿಗಳಿಗೆ ಮಾಹಿತಿ  ನೀಡಿದ್ದಾರೆ.

ಗುಲಾಮ್ ಹೈದರ್ ಲಾಹೋರ್ ಅಸೋಸಿಯೇಶನ್ ನ ಪೂರ್ವ ವಲಯಕ್ಕೆ ಸೇರಿದ ಕ್ರಿಕೆಟಿಗರಾಗಿದ್ದು, ಉತ್ತಮ ಪ್ರದರ್ಶನದ ಹೊರತಾಗಿಯೂ ಆಯ್ಕೆ ಸಮಿತಿ ತಮ್ಮನ್ನು ಆಯ್ಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ."ಕ್ಲಬ್ ಮತ್ತು  ಪ್ರಾಂತೀಯ ಮಟ್ಟದ ಟೂರ್ನಿಗಳಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ಈ ಹಿಂದೆ ನನ್ನ ಪ್ರದರ್ಶನ ನೋಡಿದ್ದ ಅಧಿಕಾರಿಯೊಬ್ಬರು ನನಗೆ ಲಾಹೋರ್ ತಂಡದಲ್ಲಿ ಆಡುವ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು.  ಆದರೆ ಬಳಿಕ ಅದೇ ವ್ಯಕ್ತಿ ನನ್ನನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಲಾಹೋರ್ ತಂಡದಲ್ಲಿ ಆಡಲು ಇಲ್ಲಿನವರಿಗೆ ಲಂಚ ನೀಡಬೇಕಂತೆ. ಆದರೆ ನಾನು ಬಡವ. ಲಂಚ ನೀಡಲ ಸಾಧ್ಯವಿಲ್ಲ.. ಹೀಗಾಗಿ  ಮನನೊಂದು ಆತ್ಮಹತ್ಯೆಗೆ ಯತ್ನಿಸಿದೆ" ಎಂದು ಹೇಳಿದ್ದಾರೆ.

ಇದೇ ವೇಳೆ ಆಯ್ಕೆ ಸಮಿತಿಯನ್ನು ದೂಷಿಸಿರುವ ಹೈದರ್ ನನ್ನ ಸಾವಿಗೆ ಆಯ್ಕೆದಾರರೇ ಕಾರಣ..ಪ್ರದರ್ಶನದ ಆಧಾರದ ಮೇಲೆ ಅವರು ನನ್ನನ್ನು ಆಯ್ಕೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಪ್ರದರ್ಶನದ ಆಧಾರದ  ಮೇಲೆ ತಮ್ಮನ್ನು ತಂಡಕ್ಕೆ ಆಯ್ಕೆ ಮಾಡದಿದ್ದರೆ ಗಡಾಫಿ ಮೈದಾನದ ಅವರಣದಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.