ಮಾನಸಿಕವಾಗಿ ಸದೃಢವಾಗುವುದು ಹೇಗೆ ಎಂಬುದನ್ನು ಸಚಿನ್ ಕಲಿಸಿದ್ದಾರೆ: ಅಜಿಂಕ್ಯ ರಹಾನೆ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನಾನು ಮಾನಸಿಕವಾಗಿ ಸದೃಢವಾಗುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿರುವುದಾಗಿ....

Published On :
ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ನಾನು ಮಾನಸಿಕವಾಗಿ ಸದೃಢವಾಗುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿರುವುದಾಗಿ ಟೀಂ ಇಂಡಿಯಾ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಅವರು ಶುಕ್ರವಾರ ಹೇಳಿದ್ದಾರೆ.
ಕೋಲ್ಕತಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಭರ್ಜರಿ ಗೆಲುವು ಸಾಧಿಸಿದ ನಂತರ ಈಗ ಮೂರನೇ ಪಂದ್ಯದ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಹಾನೆ ಇಟೀಂ ಇಂಡಿಯಾ ಆಟಗಾರರು ಮೂರನೇ ಪಂದ್ಯದ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆದರೂ ಆಸೀಸ್ ಅನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದಿದ್ದಾರೆ.
ಇದೇ ವೇಳೆ ಇತ್ತೀಚಿಗೆ ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಜೊತೆಗಿನ ಭೇಟಿಯನ್ನು ನೆನಪಿಸಿಕೊಂಡ ರಹನೆ, ನಮ್ಮ ಆಟದಲ್ಲಿ ನಂಬಿಕೆಯನ್ನಿರಿಸುವಂತೆ ಅವರು ಸಲಹೆ ನೀಡಿದ್ದರು. ಕೆಲವೊಮ್ಮೆ ನಿಮಗೆ ಅವಕಾಶ ಸಿಗಬಹುದು. ಇನ್ನು ಕೆಲವೊಮ್ಮೆ ಸಿಗದೇ ಹೋಗಬಹುದು. ಪೂರ್ವ ಸಿದ್ಧತೆ ಮಾತ್ರ ನಿಮ್ಮ ಕೈಯಲ್ಲಿದೆ. ಯಾವಾಗಲೂ ಸರಿಯಾದ ಮನೋಸ್ಥಿತಿಯನ್ನು ಹೊಂದಿರಬೇಕು. ನನ್ನ ತಾಂತ್ರಿಕತೆ ಬಗ್ಗೆ ಅವರೇನು ಹೇಳಲಿಲ್ಲ. ಆದರೆ ಮಾನಸಿಕವಾಗಿ ಸದೃಢವಾಗುವುದು ಹೇಗೆ ಎಂಬುದನ್ನು ಹೇಳಿಕೊಟ್ಟರು. ಅವರ ಮಾತಿನಿಂದ ನನ್ನ ವಿಶ್ವಾಸ ಮತ್ತಷ್ಟು ಹೆಚ್ಚಾಯಿತು ಎಂದಿದ್ದಾರೆ.
ಇನ್ನು ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್ ಬಗ್ಗೆ ಪ್ರತಿಕ್ರಿಯಿಸಿದ ರಹಾನೆ, ಆ ಇಬ್ಬರು ಆಟಗಾರರು ತುಂಬಾ ಮುಖ್ಯವಾಗಿದ್ದು, ಅವರಲ್ಲಿ ವಿಶ್ವಾಸ ತುಂಬಬೇಕು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


