ಕ್ರಿಕೆಟ್

ಸಚಿನ್‌ರ ದಾಖಲೆಗಳನ್ನು ಮುರಿಯಬಲ್ಲ ತಾಕತ್ತು ಕೊಹ್ಲಿಗೆ ಇದೆ: ಸೆಹ್ವಾಗ್

ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನೆಲ್ಲ ಮುರಿಬಲ್ಲ ತಾಕತ್ತು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಇದೆ...

ಸಚಿನ್‌ರ ದಾಖಲೆಗಳನ್ನು ಮುರಿಯಬಲ್ಲ ತಾಕತ್ತು ಕೊಹ್ಲಿಗೆ ಇದೆ: ಸೆಹ್ವಾಗ್
ವಿರಾಟ್ ಕೊಹ್ಲಿ-ವೀರೇಂದ್ರ ಸೆಹ್ವಾಗ್
Published On :
ನವದೆಹಲಿ: ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನೆಲ್ಲ ಮುರಿಬಲ್ಲ ತಾಕತ್ತು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಇದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. 
ಕೊಹ್ಲಿ ತನ್ನ 10 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಸಚಿನ್ ಅವರು ಹಲವು ದಾಖಲೆಗಳನ್ನು ಮುರಿದು ಹಾಕಿದ್ದಾರೆ. ಆಗಂತ ವಿರಾಟ್ ಕೊಹ್ಲಿ ಮತ್ತೊಬ್ಬ ಸಚಿನ್ ಎಂದು ಹೇಳುವುದಿಲ್ಲ. ಕ್ರಿಕೆಟ್ ಎಂದರೇ ಸಚಿನ್ ಎಂಬ ಮನಸ್ಥಿತಿಯನ್ನು ಬದಲಾಯಿಸಬಲ್ಲ ತಾಕತ್ತು ಅವರಲ್ಲಿದೆ ಎಂದರು. 
28 ವರ್ಷದ ವಿರಾಟ್ ಕೊಹ್ಲಿ ಮುಂದಿನ 10 ವರ್ಷಗಳ ಕಾಲ ಟೀಂ ಇಂಡಿಯಾ ಪರವಾಗಿ ಆಡಬಹುದು. ಆಗ ವಿರಾಟ್ ಕೊಹ್ಲಿ ಸಚಿನ್ ಅವರಿಗಿಂತ ಅಮೋಘ ದಾಖಲೆಗಳನ್ನು ಮಾಡುವ ಸಾಧ್ಯತೆಗಳಿವೆ. 
ಶ್ರೀಲಂಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ 30ನೇ ಶತಕ ಸಿಡಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸಚಿನ್ ಅವರು 49 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದು ಅವರ ಈ ವಿಶ್ವ ದಾಖಲೆಯನ್ನು ಕೊಹ್ಲಿ ಮುಂದಿನ ದಿನಗಳಲ್ಲಿ ಮುರಿಯಬಹುದು ಎಂದು ಹೇಳಿದ್ದಾರೆ. 
ಸದ್ಯ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ದೂಳಿಪಟ್ಟ ಮಾಡಿದ್ದಾರೆ. ಅತೀ ವೇಗವಾಗಿ 30 ಶತಕ ಸಿಡಿಸಿದ ಅಗ್ರ ಆಟಗಾರ. ವೇಗವಾಗಿ 7 ಸಾವಿರ ರನ್ ಪೂರೈಸಿದ ದಾಖಲೆಗಳನ್ನು ಕೊಹ್ಲಿ ಬರೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.