ಜಿಎಸ್ಟಿ ಅನ್ವಯ ಮೊದಲ ಹಂತವಾಗಿ 44 ಲಕ್ಷ ರುಪಾಯಿ ತೆರಿಗೆ ಪಾವತಿಸಿದ ಬಿಸಿಸಿಐ
ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅನ್ವಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೊದಲ ಹಂತವಾಗಿ 44 ಲಕ್ಷ ರುಪಾಯಿ ತೆರಿಗೆಯನ್ನು...

Published On :
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅನ್ವಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೊದಲ ಹಂತವಾಗಿ 44 ಲಕ್ಷ ರುಪಾಯಿ ತೆರಿಗೆಯನ್ನು ಪಾವತಿಸಿದೆ.
ಜುಲೈ 1ರಿಂದ ಜಿಎಸ್ಟಿ ಜಾರಿಗೆ ಬಂದಿದ್ದು ಇದರನ್ವಯ ದೇಶದ ಅತೀ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಬಿಸಿಸಿಐ 44 ಲಕ್ಷ ರುಪಾಯಿ ತೆರಿಗೆ ಪಾವತಿಸಿದೆ. ಇನ್ನು 2015-16ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಂದ ಬಿಸಿಸಿಐಗೆ ಬಂದ ಆದಾಯದ ಒಟ್ಟು ಮೊತ್ತದಲ್ಲಿ ಸಹ ಆಟಗಾರರಿಗೂ ಹಣ ನೀಡಲಾಗಿದೆ.
ರಾಷ್ಟ್ರೀಯ ತಂಡದ ಫಿಜಿಯೋ ಫ್ಯಾಟ್ರಿಕ್ ಫರ್ಹಾಟ್ 5 ತಿಂಗಳ ಅವಧಿಯ ಸೇವೆಗೆ 6 ಲಕ್ಷ ರುಪಾಯಿ ಪಡೆದಿದ್ದಾರೆ. ಅದೇ ರೀತಿ ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿಗೆ 92 ಲಕ್ಷ ರುಪಾಯಿ ಹಾಗೂ ಹರ್ಭಜನ್ ಸಿಂಗ್ 62 ಲಕ್ಷ ರುಪಾಯಿ ನೀಡಲಾಗಿದೆ ಎಂದು ಬಿಸಿಸಿಐ ವೆಸ್ಟ್ ಸೈಟ್ ನಲ್ಲಿ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


