ರವೀಂದ್ರ ಜಡೇಜಾ ರೆಸ್ಟೋರೆಂಟ್ ಮೇಲೆ ಅಧಿಕಾರಿಗಳ ದಾಳಿ, ಹಳಸಿದ ಆಹಾರ ಪತ್ತೆ!
ಖ್ಯಾತ ಭಾರತೀಯ ಕ್ರಿಕೆಟಿಗೆ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಅಸುರಕ್ಷಿತ ಮತ್ತು ಹಳಸಿದ ಆಹಾರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

Published On :
ರಾಜ್ ಕೋಟ್: ಖ್ಯಾತ ಭಾರತೀಯ ಕ್ರಿಕೆಟಿಗೆ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಅಸುರಕ್ಷಿತ ಮತ್ತು ಹಳಸಿದ ಆಹಾರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ರಾಜ್ ಕೋಟ್ ನ ಕಾಲವಾಡ್ ರಸ್ತೆಯಲ್ಲಿರುವ 'ಜಡ್ಡೂಸ್ ಫುಡ್ ಫೀಲ್ಡ್' ಮೇಲೆ ನಗರಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಹಳಸಿದ ಮತ್ತು ತಿನ್ನಲು ಯೋಗ್ಯವಲ್ಲದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಜಡೇಜಾ ಅವರ ಸೋದರಿ ನೈನಾಬಾ ಅನಿರುದ್ಧ್ ಸಿಂಗ್ ಜಡೇಜಾ ಈ ರೆಸ್ಟೋರೆಂಟ್ ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಇನ್ನು ರಾಜ್ ಕೋಟ್ ನಲ್ಲಿ ಹಲವು ದಿನಗಳಿಂದ ಹೊಟೆಲ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಹೊಟೆಲ್ ನಲ್ಲಿ ಆರೋಗ್ಯಕರವಲ್ಲದ ಆಹಾರಗಳನ್ನು ನೀಡುತ್ತಿದ್ದಾರೆ ಎಂಬ ದೂರುಗಳ ಆಧಾರದ ಮೇಲೆ ಅಧಿಕಾರಿಗಳು ರಾಜ್ ಕೋಟ್ ಹಲವು ಹೊಟೆಲ್ ಗಳ ಮೇಲೆ ದಾಳಿ ಮಾಡಿದ್ದರು. ಇದೀಗ ಕ್ರಿಕೆಟರ್ ಜಡೇಜಾ ಒಡೆತನದ 'ಜಡ್ಡೂಸ್ ಫುಡ್ ಫೀಲ್ಡ್' ಮೇಲೆ ದಾಳಿ ಮಾಡಿದ್ದಾರೆ.
ಈ ವೇಳೆ ಹಳಸಿದ ಆಹಾರ ಪದಾರ್ಥಗಳು ಪತ್ತೆಯಾಗಿದ್ದು ಮಾತ್ರವಲ್ಲದೇ ಅಡುಗೆಗೆ ಅಜಿನೋ ಮೊಟೊ ಮತ್ತು ಕೃತಕ ಬಣ್ಣಗಳನ್ನು ಬಳಸುತ್ತಿರುವುದನ್ನೂ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ರುಚಿ ಹೆಚ್ಚಿಸುವ ಆರೋಗ್ಯಕ್ಕೆ ಅಪಾಯಕಾರಿಯಾದ ಅಜಿನೋಮೋಟೋ ಬಳಕೆಗೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಿದೆಯಾದರೂ, ಜಡೇಜಾ ರೆಸ್ಟೋರೆಂಟ್ ನಲ್ಲಿ ಅಜಿನೋಮೋಟೋವನ್ನು ಬಳಕೆ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಲ್ಲದೆ ರೆಸ್ಟೋರೆಂಟ್ ನಲ್ಲಿ ಸ್ವಚ್ಛತೆ ಪಾಲಿಸದಿರುವುದಕ್ಕೆ ಮಾಲೀಕರಿಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಅಂತೆಯೇ ಹೊಟೆಲ್ ರೆಫ್ರಿಜರೇಟರ್ ಗಳಲ್ಲಿ ಇದ್ದ ಅವಧಿ ಮೀರಿದ (ಎಕ್ಸ್‌ಪೈರಿ ಡೇಟ್) ಬೇಕರಿ ವಸ್ತುಗಳೂ ಪತ್ತೆಯಾಗಿದ್ದು, ಒಟ್ಟು 17 ಕೆ.ಜಿ ತರಕಾರಿ, 7 ಕೆ.ಜಿ ಪಾಸ್ತಾ, ಮ್ಯಾಕ್ರೋನಿ, ಮಂಚೂರಿ, 14 ಕೆ.ಜಿ ಬೇಕರಿ ಐಟಂಗಳು, 4 ಕೆ.ಜಿ ಗ್ರೇವಿ, 500 ಗ್ರಾಂ ಅಜಿನೊ ಮೊಟೊ, 1.5 ಕೆ.ಜಿ ಕೃತಕ ಬಣ್ಣಗಳನ್ನು ಅಧಿಕಾರಿಗಳ ತಂಡ ನಾಶಪಡಿಸಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.