ಚೆತೇಶ್ವರ್ ಪೂಜಾರ ಅವರನ್ನು ಎ ಗ್ರೂಪ್ ಕಾಂಟ್ರಾಕ್ಟ್ ನಲ್ಲೇ ಮುಂದುವರೆಸಿ: ರವಿ ಶಾಸ್ತ್ರಿ
ಟೆಸ್ಟ್ ಫಾರ್ಮೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಚೇತೆಶ್ವರ್ ಪೂಜಾರ ಅವರನ್ನು ಬಿಸಿಸಿಐ ನ ಆಡಳಿತಗಾರರ ಸಮಿತಿ ಎ ಗ್ರೂಪ್ ಕಾಂಟ್ರಾಕ್ಟ್ ನಲ್ಲೇ ಉಳಿಸಿಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ

Published On :
ನವದೆಹಲಿ: ಟೆಸ್ಟ್ ಫಾರ್ಮೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಚೇತೆಶ್ವರ್ ಪೂಜಾರ ಅವರನ್ನು ಬಿಸಿಸಿಐ ನ ಆಡಳಿತಗಾರರ ಸಮಿತಿ ಎ ಗ್ರೂಪ್ ಕಾಂಟ್ರಾಕ್ಟ್ ನಲ್ಲೇ ಉಳಿಸಿಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಕಾಂಟ್ರಾಕ್ಟ್ ಒಪ್ಪಂದ ಪರಿಷ್ಕರಣೆ ವೇಳೆಯಲ್ಲಿ ಚೆತೇಶ್ವರ್ ಪೂಜಾರ ಅವರನ್ನು ಎ ಗ್ರೂಪ್ ನಲ್ಲಿಯೇ ಮುಂದುವರೆಸಬೇಕು ಎಂದು ರವಿ ಶಾಸ್ತ್ರಿ ಬಿಸಿಸಿಐ ಗೆ ಸಲಹೆ ನೀಡಿದ್ದಾರೆ. ಚೆತೇಶ್ವರ್ ಪೂಜಾರ ಹೆಸರು ಪ್ರಸ್ತುತ ಗ್ರೇಡ್ ಎ ಕಾಂಟ್ರಾಕ್ಟ್ ನಲ್ಲಿಯೇ ಇದ್ದು ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೋಹ್ಲಿ, ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರೆಹಾನೆ ಅವರ ಹೆಸರುಗಳ ಜೊತೆ ಇದೆ. ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರ ಪುಸ್ತಕ ಡೆಮಾಕ್ರೆಸೀಸ್ XI ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತನಾಡಿರುವ ರವಿ ಶಾಸ್ತ್ರಿ, ಚೆತೇಶ್ವರ ಪೂಜಾರ ಅವರಂತಹ ಆಟಗಾರರು ಕಾಂಟ್ರಾಕ್ಟ್ ಪಟ್ಟಿಯಲ್ಲಿ ಎ ಗ್ರೂಪ್ ನಲ್ಲಿರುವುದು ಮುಖ್ಯ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


