ಮೊದಲ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗೆ ಭಾರತ ಆಲ್ ಔಟ್
ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಕೇವಲ 172 ರನ್ ಗಳಿಗೆ ಆಲ್ ಔಟ್ ಆಗಿದೆ.

Published On :
ಕೋಲ್ಕತಾ: ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಕೇವಲ 172 ರನ್ ಗಳಿಗೆ ಆಲ್ ಔಟ್ ಆಗಿದೆ.
ಟೆಸ್ಟ್ ಪಂದ್ಯ ಆರಂಭವಾದ ದಿನದಿಂದಲೂ ಮಳೆ ಕಾಟಕ್ಕೆ ತುತ್ತಾಗಿದ್ದ ಪಂದ್ಯದಲ್ಲಿ ಲಂಕಾದ ಬೌಲರ್ ಲಕ್ಮಲ್ ಉತ್ತಮ ಸ್ಪೆಲ್ ಮೂಲಕ ಭಾರತೀಯ ಬ್ಯಾಟ್ಸಮನ್ ಗಳನ್ನು ಕಾಡಿದರು, 19 ಓವರ್ ಗಳನ್ನು ಎಸೆದ ಲಕ್ಮಲ್ 12 ಮೇಡನ್ ಗಳೊಂದಿಗೆ ಪ್ರಮುಖ 4 ವಿಕೆಟ್ ಗಳನ್ನು ಪಡೆದು ಭಾರತದ ಕುಸಿತಕ್ಕೆ ಕಾರಣವಾದರು. ಭಾರತದ ಪರ ಚೇತೇಶ್ವರ ಪೂಜಾರ 52 ರನ್ ಗಳನ್ನು ಗಳಿಸಿದ್ದು ಬಿಟ್ಟರೆ ಲಂಕಾದ ಬೌಲಿಂಗ್ ದಾಳಿಗೆ ಮತ್ತಾವ ಆಟಗಾರರೂ ದಿಟ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ.
ತಂಡದ ನಾಯಕ ವಿರಾಟ್ ಕೊಹ್ಲಿ ಸಹಿತ ಇಬ್ಬರು ಪ್ರಮುಖ ಬ್ಯಾಟ್ಸಮನ್ ಗಳು ಡಕ್ ಔಟ್ ಆಗಿದ್ದು ಭಾರತಕ್ಕೆ ಭಾರಿ ಹಿನ್ನಡೆಯುಂಟು ಮಾಡಿತು. ಇದಲ್ಲದೆ 4 ಮಂದಿ ಆಟಗಾರರು ಎರಡಂಕಿ ಕೂಡ ದಾಟುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ ಕೇವಲ 172 ರನ್ ಗಳಿಸಿ ಆಲ್ ಔಟ್ ಆಯಿತು.
ಲಂಕಾ ಪರ ಲಕ್ಮಲ್ 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಲಾಹಿರು ಗಮಾಗೆ, ಶಣಕ ಮತ್ತು ಪೆರೆರಾ ತಲಾ 2 ವಿಕೆಟ್ ಕಬಳಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


