ನಾನು ರೋಬೋಟ್ ಅಲ್ಲ, ವಿಶ್ರಾಂತಿ ಬೇಕೆನಿಸಿದಾಗ ಪಡೆಯುತ್ತೇನೆ: ವಿರಾಟ್ ಕೊಹ್ಲಿ
ನಾನು ರೋಬೋಟ್ ಅಲ್ಲ,ನನಗೆ ವಿಶ್ರಾಂತಿ ಬೇಕು ಅನಿಸಿದಾಗ ನಾನೇ ಕೇಳುತ್ತೇನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ...

Published On :
ಕೋಲ್ಕತ್ತಾ: ನಾನು ರೋಬೋಟ್ ಅಲ್ಲ,ನನಗೆ ವಿಶ್ರಾಂತಿ ಬೇಕು ಅನಿಸಿದಾಗ ನಾನೇ ಕೇಳುತ್ತೇನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಬಳಿಕ ವಿಶ್ರಾಂತಿ ನೀಡುವಂತೆ ಆಯ್ಕೆ ಸಮಿತಿಗೆ ಮನವಿ ಮಾಡಿದ್ದಾರೆ ಎಂಬ ವರದಿಗಳಾಗಿದ್ದವು. ಇಂತಹ ವದಂತಿಗಳಿಗೆ ತೆರೆ ಎಳೆಯಲು ಮುಂದಾಗಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಗೂ ಕೊಹ್ಲಿಯೇ ನಾಯಕತ್ವ ವಹಿಸಲಿದ್ದಾರೆ. ಆ ನಂತರ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ಯೋಚಿಸುತ್ತೇವೆ ಎಂದಿದ್ದರು.
ಲಂಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ಅವರು, ಖಂಡಿತವಾಗಿ ನನಗೂ ವಿಶ್ರಾಂತಿ ಬೇಕು, ನನಗೆ ವಿಶ್ರಾಂತಿಯ ಅಗತ್ಯವಿಲ್ಲವ? ನನ್ನ ದೇಹಕ್ಕೆ ವಿಶ್ರಾಂತಿ ನೀಡಬೇಕು ಅನಿಸಿದಾಗ ನಾನು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಾನೇನು ರೋಬೋ ಅಲ್ಲ. ಬೇಕಾದರೆ ನನ್ನ ಚರ್ಮವನ್ನು ಸೀಳಿ ರಕ್ತಸ್ರಾವವಾಗಬಹುದು ಎಂದು ಹೇಳಿದರು.
ಇದೇ ವೇಳೆ ಲಂಕಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಮೈದಾನದಲ್ಲಿ ಹೆಚ್ಚು ಶ್ರಮಿಸುವ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಪರಿಸ್ಥಿತಿ ಕೆಲವೊಮ್ಮೆ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಒಂದು ವರ್ಷದಲ್ಲಿ ಎಲ್ಲಾ ಕ್ರಿಕೆಟಿಗರು 40 ಪಂದ್ಯಗಳನ್ನು ಆಡುತ್ತಾರೆ. ಅವರಲ್ಲಿ ಮೂವರಿಗೆ ವಿಶ್ರಾಂತಿ ಸಿಗುತ್ತದೆ. ಏಕದಿನ ಪಂದ್ಯವೊಂದರಲ್ಲಿ 11 ಆಟಗಾರರು ಆಡುತ್ತಾರೆ. ಅವರಲ್ಲಿ ಎಲ್ಲರೂ 45 ಓವರ್ ಗಳಲ್ಲಿ ಆಡುವುದಿಲ್ಲ. ಇನ್ನು ಟೆಸ್ಟ್ ಪಂದ್ಯಕ್ಕೆ ಬಂದರೆ ಎಲ್ಲರೂ 30 ಓವರ್ ಬೌಲಿಂಗ್ ಮಾಡುವುದಿಲ್ಲ. ಈಗಿರುವಾಗ ಅವರಲ್ಲಿ ಒಬ್ಬಿಬ್ಬರಿಗೆ ಮಾತ್ರ ವಿಶ್ರಾಂತಿ ಅವಶ್ಯಕವಿರುತ್ತದೆ. ಜನರು ಮಾತ್ರ ಎಲ್ಲರು 40 ಪಂದ್ಯಗಳನ್ನು ಆಡಿದ್ದಾರೆ ಎಂದು ತಿಳಿಯುತ್ತಾರೆ. ಆದರೆ ಯಾರು ಹೆಚ್ಚಾಗಿ ಕ್ರಿಸ್ ನಲ್ಲಿ ಸಮಯ ಕಳೆದಿದ್ದಾರೆ ಎಂಬುದನ್ನು ಲೆಕ್ಕ ಹಾಕುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


