ಕ್ರಿಕೆಟ್

3ನೇ ಟಿ20 ಪಂದ್ಯ: ಮಳೆಯಾಟದ ನಡುವೆಯೂ ಗೆದ್ದ ಭಾರತಕ್ಕೆ ಸರಣಿ ಜಯ!

ಮಳೆಯಾಟದ ಹೊರತಾಗಿಯೂ ಭಾರತ ತಂಡ 6 ರನ್ ಗಳ ರೋಚಕ ಜಯ ದಾಖಲಿಸಿ 2-1 ಅಂತರದಲ್ಲಿ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

3ನೇ ಟಿ20 ಪಂದ್ಯ: ಮಳೆಯಾಟದ ನಡುವೆಯೂ ಗೆದ್ದ ಭಾರತಕ್ಕೆ ಸರಣಿ ಜಯ!
ಸಂಭ್ರಮದಲ್ಲಿ ಕೊಹ್ಲಿ-ರೋಹಿತ್ ಶರ್ಮಾ
Published On :
ತಿರುವನಂತಪುರಂ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಮಳೆಯಾಟದ ಹೊರತಾಗಿಯೂ ಭಾರತ ತಂಡ 6 ರನ್ ಗಳ ರೋಚಕ ಜಯ ದಾಖಲಿಸಿ 2-1 ಅಂತರದಲ್ಲಿ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಮೈದಾನದಲ್ಲಿ ಇಂದು ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ಆರಿಸಿಕೊಂಡಿತು. ಸತತ ಮಳೆ ಸುರಿದ ಪರಿಣಾಮ ಪಂದ್ಯವನ್ನು ತಲಾ 8 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.  ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 67 ರನ್ ಕಲೆಹಾಕಿತು. ಭಾರತದ ಪರ ವಿರಾಟ್​ ಕೊಹ್ಲಿ (13) ರನ್​ ಗಳಿಸಿದರೆ ಮನೀಷ್​ ಪಾಂಡೆ (17), ಹಾರ್ದಿಕ್​ ಪಾಂಡ್ಯ (14*) ರನ್​ ಗಳಿಸಿದರು. ನ್ಯೂಜಿಲೆಂಡ್​ ಪರ ಟಿಮ್​ ಸೌಥಿ (13 ಕ್ಕೆ 3), ಇಶ್​  ಸೋಧಿ (23 ಕ್ಕೆ 2) ಮತ್ತು ಟ್ರೆಂಟ್​ ಬೋಲ್ಟ್​ (13 ಕ್ಕೆ 1) ವಿಕೆಟ್​ ಪಡೆದರು. 
68 ರನ್ ಗಳ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್​ ತಂಡ ನಿಗದಿತ 8 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 61 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತದ ಎದುರು 6 ರನ್ ಗಳ ವಿರೋಚಿತ ಸೋಲು ಅನುಭವಿಸಿತು. ನ್ಯೂಜಿಲೆಂಡ್​ ಪರ ಕೇನ್​ ವಿಲಿಯಮ್ಸ್​  (8 ರನ್), ಕೋಲಿನ್​ ಮುನ್ರೋ (7ರನ್) ರನ್​, ಗ್ಲೇನ್​ ಫಿಲಿಪ್ಸ್​ (11ರನ್), ಗ್ರಾಂಡ್​ ಹೋಮ್​ (17 ರನ್)  ಉತ್ತಮ ಬ್ಯಾಟಿಂಗ್ ಮಾಡುವ ಪ್ರಯತ್ನ ಮಾಡಿದರಾದರೂ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಭಾರತದ ಪರ ಜಸ್ಪ್ರೀತ್​ ಬುಮ್ರಾ 2 ವಿಕೆಟ್ , ಭುವನೇಶ್ವರ್​  ಕುಮಾರ್​ ಮತ್ತು ಕುಲದೀಪ್​ ಯಾದವ್​ ತಲಾ ಒಂದು ವಿಕೆಟ್​ ಪಡೆದರು.
2 ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಬುಮ್ರಾ ಪಂದ್ಯ ಶ್ರೇಷ್ಟಪ್ರಶಸ್ತಿ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.