ಮೈದಾನದಲ್ಲಿ ಕ್ಯಾಚ್ ಬಿಟ್ಟ ಧೋನಿ, ನಕ್ಕ ಕೊಹ್ಲಿ; ಯಾಕೆ ಅಂತೀರಾ? ಈ ವಿಡಿಯೋ ನೋಡಿ!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ನಲ್ಲಿ ಅದ್ಭುತ ಕ್ಯಾಚ್ ಗಳನ್ನು ಹಿಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ...

Published On :
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ನಲ್ಲಿ ಅದ್ಭುತ ಕ್ಯಾಚ್ ಗಳನ್ನು ಹಿಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ ಅಭ್ಯಾಸ ಪಂದ್ಯದ ವೇಳೆ ಕೀಪಿಂಗ್ ಗ್ಲೌಸ್ ಧರಿಸಿದೆ ಸಾಮಾನ್ಯ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಧೋನಿ ಬದಲಿಗೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ವಿಕೆಟ್ ಕೀಪರ್ ಹಿಂದೆ ಬೌಂಡರಿ ಲೈನ್ ನಲ್ಲಿ ನಿಂತಿದ್ದ ಎಂಎಸ್ ಧೋನಿ, ಹಾರ್ಧಿಕ್ ಪಾಂಡ್ಯ ಎಸೆತದಲ್ಲಿ ಟಸ್ಕಿನ್ ಸಿಡಿಸಿದ ಚೆಂಡನ್ನು ಕೈಚೆಲ್ಲಿದರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ನಗು ತಡೆಯಲಾಗದೇ ಜೋರಾಗಿ ನಕ್ಕರು.
ಇನ್ನು ತಮ್ಮ ಎಡವಟ್ಟಿನಿಂದ ಕ್ಯಾಚ್ ಮಿಸ್ ಮಾಡಿದ ಧೋನಿ ಸಹ ನಗುತ್ತಾ ಚೆಂಡನ್ನು ಕೀಪರ್ ಗೆ ಎಸೆದರು. ಈ ದೃಶ್ಯ ಆಟಗಾರರನ್ನು ನಗುವಂತೆ ಮಾಡಿತ್ತು.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ 324 ರನ್ ಗಳಿಸಿತ್ತು. 325 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 84 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಭಾರತಕ್ಕೆ ಶರಣಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


