ಚಾಂಪಿಯನ್ಸ್ ಟ್ರೋಫಿಗೆ ಭದ್ರತೆ ಸಮಸ್ಯೆಯ ಆತಂಕವಿದ್ದರೂ ನಮ್ಮ ಆದ್ಯತೆ ಕ್ರಿಕೆಟ್‌ಗೆ: ಕೊಹ್ಲಿ
ಕೆಲ ದಿನಗಳ ಹಿಂದಷ್ಟೆ ಮ್ಯಾಂಚೆಸ್ಟರ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಜೂನ್ 1ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಗೆ ಭದ್ರತೆ ಸಮಸ್ಯೆ ಆಂತಕ...

Published On :
ಲಂಡನ್: ಕೆಲ ದಿನಗಳ ಹಿಂದಷ್ಟೆ ಮ್ಯಾಂಚೆಸ್ಟರ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಜೂನ್ 1ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಗೆ ಭದ್ರತೆ ಸಮಸ್ಯೆ ಆಂತಕ ಸೃಷ್ಟಿಯಾಗಿದ್ದರು ನಮ್ಮ ಆದ್ಯತೆ ಕ್ರಿಕೆಟ್‌ಗೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆ ಲಂಡನ್ ತಲುಪಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ. ಚಾಂಪಿಯನ್ಸ್ ಟ್ರೋಫಿ ಉಳಿಸಿಕೊಳ್ಳುವುದೊಂದೇ ನಮ್ಮ ಗುರಿ. ಭದ್ರತೆ ಆಂತಕ ಖಂಡಿತ ಇದೆ ಆದರೆ ಚಾಂಪಿಯನ್ಸ್ ಟ್ರೋಫಿಯಂಥ ಮಹತ್ವದ ಪಂದ್ಯಾವಳಿಯಲ್ಲಿ ಆಡುವಾಗ ನಮ್ಮ ಗಮನವನ್ನು ಏನಿದ್ದರೂ ಆಟದ ಕಡೆಗೆ ಮಾತ್ರ ಕೇಂದ್ರೀಕರಿಸಲು ಪ್ರಯತ್ಮಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಬಿಸಿಸಿಐನ ಭದ್ರತಾ ಅಧಿಕಾರಿ ದೆಹಲಿಯ ಮಾಜಿ ಆಯುಕ್ತ ನೀರಜ್ ಕುಮಾರ್ ಭಾರತ ತಂಡ ಪಂದ್ಯ ಆಡಲಿರುವ ಸ್ಥಳಗಳಿಗೆ ತೆರಳಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಜೂನ್ 4ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಎಡ್ಜ್ ಬಸ್ಟನ್ ನಲ್ಲಿ ಭಾರತ ಮೊದಲ ಪಂದ್ಯವನ್ನಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿಚಾಂಪಿಯನ್ಸ್ ಟ್ರೋಫಿChampions TrophyManchester Attackಮ್ಯಾಂಚೆಸ್ಟರ್ ದಾಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


