ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೂ ಬರಲಿದೆ ಡಿಆರ್ಎಸ್!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಬಲ ವಿರೋಧ ಹೊಂದಿರುವ ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್ಎಸ್) ಟೆಸ್ಟ್ ಮತ್ತು ಏಕದಿನ...

Published On :
ಲಂಡನ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಬಲ ವಿರೋಧ ಹೊಂದಿರುವ ಅಂಪೈರ್ ನಿರ್ಧಾರ ಪರಾಮರ್ಶೆ ವ್ಯವಸ್ಥೆ(ಡಿಆರ್ಎಸ್) ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಬಳಿಕ ಇದೀಗ ಟಿ20ಗೂ ತರಲು ವೇದಿಕೆ ಸಿದ್ಧಗೊಂಡಿದೆ.
ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೂ ಡಿಆರ್ಎಸ್ ಬಳಸಬೇಕು ಎಂದು ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದೆ. ಇದರ ಜತೆಗೆ ಮೈದಾನದಲ್ಲಿ ದುರ್ನಡತೆ ತೋರಿದ ಆಟಗಾರರನ್ನು ಮೈದಾನದಿಂದ ಹೊರಕಳಿಸುವ ಅಧಿಕಾರವನ್ನು ಮೈದಾನದ ಅಂಪೈರ್ ಗೆ ನೀಡಬೇಕು ಎಂದು ಹೇಳಲಾಗಿದೆ.
ಡಿಆರ್ಎಸ್ ನ ಎಲ್ ಬಿಡಬ್ಲ್ಯು ರಿವ್ಯೂ, ಮೈದಾನದ ಅಂಪೈರ್ ಕಾಲ್ ಎಂದು ಪ್ರಕಟವಾದಲ್ಲಿ ತಂಡ ಡಿಆರ್ಎಸ್ ರಿವ್ಯೂ ಕಳೆದುಕೊಳ್ಳುವ ಹಾಲಿ ವ್ಯವಸ್ಥೆಯನ್ನು ಬದಲಾಯಿಸಲು ಶಿಫಾರಸು ಮಾಡಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 80 ಓವರ್ ಗಳ ಬಳಿಕ ಸಿಗಲಿರುವ ಮತ್ತೆರಡು ರಿವ್ಯೂಗಳಿಗೆ ಕತ್ತರಿ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


