ಏಕದಿನ ಪಂದ್ಯದಲ್ಲಿ ತ್ರಿಶತಕ ಬಾರಿಸಿ ದಾಖಲೆ ಬರೆದ ಬಿಲಾಲ್ ಇರ್ಷಾದ್
ಪಾಕಿಸ್ತಾನ ಮೂಲದ ಬಿಲಾಲ್ ಇರ್ಷಾದ್ ಏಕದಿನ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದಾನೆ...

Published On :
ಕರಾಚಿ: ಪಾಕಿಸ್ತಾನ ಮೂಲದ ಬಿಲಾಲ್ ಇರ್ಷಾದ್ ಏಕದಿನ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದಾನೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಶ್ರಯದಲ್ಲಿ ನಡೆಯುತ್ತಿರುವ ಫಝಲ್ ಮೆಹಮ್ಮೂದ್ ಕ್ಲಬ್ ಏಕದಿನ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಬಿಲಾಲ್ ಇರ್ಷಾದ್ ಈ ಸಾಧನೆ ಮಾಡಿದ್ದಾನೆ.
ಶಹೀದ್ ಆಲಮ್ ಬಕ್ಸ್ ಕ್ಲಬ್ ಪರ ಆಡಿದ 26 ವರ್ಷದ ಬಿಲಾಲ್ ಇರ್ಷಾದ್ ಅಲ್ ರೆಹಮಾನ್ ಕ್ಲಬ್ ವಿರುದ್ಧ ಕೇವಲ 175 ಎಸೆತೆಗಳಲ್ಲಿ 42 ಬೌಂಡರಿ, 9 ಸಿಕ್ಸರ್ ಸಹಿತ 320 ರನ್ ಸಿಡಿಸಿದ್ದಾರೆ. ತಂಡ ನಿಗದಿತ 50 ಓವರ್ ನಲ್ಲಿ 556 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಅಲ್ ರೆಹಾಮಾನ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದು 411 ರನ್ ಗಳಿಂದ ಹೀನಾಯ ಸೋಲು ಅನುಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


