ಚಿನ್ನಸ್ವಾಮಿ ಕ್ರೀಡಾಂಗಣದ ಸಬ್‌ಏರ್ ವ್ಯವಸ್ಥೆಗೆ ತಲೆದೂಗಿದ ಗಂಭೀರ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ...

Published On :
ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸೌಕರ್ಯವುಳ್ಳ ಸಬ್‌ಏರ್ ಸಿಸ್ಟಮ್ ಅನ್ನು ಶ್ಲಾಘಿಸಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯ ಮಳೆಯಿಂದಾಗಿ ರದ್ದಾಗುವ ಸಾಧ್ಯತೆ ಇತ್ತು. ಎಡಬಿಡದೇ ಸುರಿದ ಮಳೆ ತಣ್ಣಗಾದಾಗ ಕೆಲವೇ ನಿಮಿಷಗಳಲ್ಲಿ ಕ್ರೀಡಾಂಗಣದಲ್ಲಿದ್ದ ನೀರನ್ನು ಸಬ್‌ಏರ್ ವ್ಯವಸ್ಥೆಯಿಂದಾಗಿ ಕ್ಲೀನ್ ಮಾಡಲಾಯಿತು. ಮಳೆಯಿಂದಾಗಿ ನಾವು ಕೂಟವನ್ನೇ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದೇವು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಸಬ್‌ಏರ್ ಸಿಸ್ಟಮ್ ಅಳವಡಿಕೆಯಿಂದಾಗಿ ಮತ್ತೆ ನಡೆಯುವಂತಾಯಿತು. ಜತೆಗೆ ಪಂದ್ಯದಲ್ಲಿ ನಾವು ಗೆಲುವ ಸಾಧಿಸಿರುವುದು ಸಂತಸ ತಂದಿದೆ. ಹೀಗಾಗಿ ಕೆಎಸ್ಸಿಎಗೆ ದೊಡ್ಡ ಧನ್ಯವಾದಗಳು ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Gautam Gambhirಗೌತಮ್ ಗಂಭೀರ್Chinnaswamy Stadiumಚಿನ್ನಸ್ವಾಮಿ ಕ್ರೀಡಾಂಗಣಕೋಲ್ಕತ್ತಾ ನೈಟ್ ರೈಡರ್ಸ್KSCAಐಪಿಎಲ್ 2017IPL 2017Kolkata Knight Riderಕೆಎಸ್ಸಿಎ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


