ಯೂನಿಸ್, ಮಿಸ್ಬಾ ವಿದಾಯಕ್ಕೆ ಯುವರಾಜ್ ಹೃದಯ ಸ್ಪರ್ಶಿ ಟ್ವೀಟ್
ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರಾದ ಮಿಸ್ಬಾ ಉಲ್ ಹಕ್ ಮತ್ತು ಯೂನಿಸ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ...

Published On :
ನವದೆಹಲಿ: ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರಾದ ಮಿಸ್ಬಾ ಉಲ್ ಹಕ್ ಮತ್ತು ಯೂನಿಸ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಹಿನ್ನಲೆಯಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಹೃದಯ ಸ್ಪರ್ಶಿ ಟ್ವೀಟ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಟ್ವೀಟ್ ನಲ್ಲಿ ನಿವೃತ್ತಿ ಪಡೆದಿರುವ ಮಿಸ್ಬಾ ಮತ್ತು ಯೂನಿಸ್ ಖಾನ್ ಗೆ ಶುಭಾಶಯ. ಕ್ರಿಕೆಟ್ ಗೆ ನೀವು ನೀಡಿರುವ ಕೊಡುಗೆ ನಮಗೆ ಸ್ಫೂರ್ತಿ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದು ಈ ಟ್ವೀಟ್ ಗೆ ಕೋಟಿಗೂ ಅಧಿಕ ರೀಟ್ವೀಟ್ ಮತ್ತು 6.22 ಕೋಟಿಗಿಂತ ಅಧಿಕ ಲೈಕ್ ಗಳು ಬಂದಿವೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸರಣಿ ನಡೆದಿಲ್ಲ. ಹೀಗಿದ್ದರೂ ಆಟಗಾರರ ನಡುವೆ ಉತ್ತಮ ಬಾಂಧವ್ಯ ಉಳಿದುಕೊಂಡಿದೆ ಎನ್ನುವುದು ವಿಶೇಷ. ಇತ್ತೀಚೆಗೆ ಶಾಹೀದ್ ಆಫ್ರಿದಿ ನಿವೃತ್ತಿಗೆ ಭಾರತೀಯ ಆಟಗಾರರೆಲ್ಲ ಕೊಹ್ಲಿ ಜೆರ್ಸಿ ಮೇಲೆ ಹಸ್ತಾಕ್ಷರ ಹಾಕಿ ಕಳುಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Yuvraj Singhಯುವರಾಜ್ ಸಿಂಗ್Younis KhanMisbah-ul-Haqಮಿಸ್ಬಾ ಉಲ್ ಹಕ್ಯೂನಿಸ್ ಖಾನ್Farewell Messageಹೃದಯ ಸ್ಪರ್ಶಿ ಟ್ವೀಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


