ಟೀಂ ಇಂಡಿಯಾ ಆಟಗಾರರಲ್ಲಿ ನಾನು ಇಷ್ಟ ಪಡದ ಆಟಗಾರ ಗಂಭೀರ್: ಶಾಹೀದ್ ಅಫ್ರಿದಿ
ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಬಿಟ್ಟು ಉಳಿದ ಆಟಗಾರರೊಂದಿಗೆ ನನಗೆ ಆತ್ಮೀಯ ಸ್ನೇಹವಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್...

Published On :
ದುಬೈ: ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಬಿಟ್ಟು ಉಳಿದ ಆಟಗಾರರೊಂದಿಗೆ ನನಗೆ ಆತ್ಮೀಯ ಸ್ನೇಹವಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿದ್ದು, ಜೂನ್ 4ರಂದು ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೆಂದು ಐಸಿಸಿ ವೆಬ್ ಸೈಟ್ ಗೆ ಬರೆದ ಲೇಖನದಲ್ಲಿ ಆಫ್ರಿದಿ ಮೇಲಿನಂತೆ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ಆಟಗಾರರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಜತೆಗೆ ನನಗೆ ಆತ್ಮೀಯ ಒಡನಾಟವಿದೆ. ಆದರೆ ಗೌತಮ್ ಗಂಭೀರ್ ಮಾತ್ರ ನನ್ನೊಂದಿಗೆ ಸಿಟ್ಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.
ಪಂದ್ಯವೊಂದರಲ್ಲಿ ಗೌತಮ್ ಗಂಭೀರ್ ಮತ್ತು ನನ್ನ ನಡುವೆ ಬಿರುಸಿನ ಮಾತುಕತೆಯಾಗಿತ್ತು. ಅದು ವಿಶ್ವಾದ್ಯಂತ ಸುದ್ದಿಯಾಗಿತ್ತು. ಆದರೆ ನಾನು ಇದೆಲ್ಲ ಆಟದಲ್ಲಿ ಮಾಮೂಲು ಎಂಬ ಕಾರಣಕ್ಕೆ ಅದನ್ನು ಮರೆತು ಬಿಟ್ಟಿದ್ದೇನೆ. ಗಂಭೀರ್ ಮಾತ್ರ ಅದರಿಂದ ಇನ್ನೂ ಹೊರಬಂದಿಲ್ಲ. ಅವರಿಗೆ ಒಳಿತಾಗಲಿ ಎಂದು ಆಫ್ರಿದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaPakistanಪಾಕಿಸ್ತಾನGautam Gambhirಗೌತಮ್ ಗಂಭೀರ್Shahid Afridiಶಾಹೀದ್ ಅಫ್ರಿದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


