'ಐಪಿಎಲ್ ಇತಿಹಾಸದಲ್ಲೆ ನಾ ಕಂಡ ಒಳ್ಳೆಯ ಇನ್ನಿಂಗ್ಸ್': ರಿಷಭ್ ಬಿರುಸಿನ ಆಟಕ್ಕೆ ಸಚಿನ ಮೆಚ್ಚುಗೆ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲೇ ನಾ ಕಂಡ ಅದ್ಭುತ ಇನ್ನಿಂಗ್ಸ್ ಎಂದರೇ ಅದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ರಿಷಭ್ ಪಂತ್‌ರದ್ದು ಎಂದು ಕ್ರಿಕೆಟ್ ದಿಗ್ಗಜ...

Published On :
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಇತಿಹಾಸದಲ್ಲೇ ನಾ ಕಂಡ ಅದ್ಭುತ ಇನ್ನಿಂಗ್ಸ್ ಎಂದರೇ ಅದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ರಿಷಭ್ ಪಂತ್‌ರದ್ದು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಿನ್ನೆ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ 43 ಎಸೆತಗಳಲ್ಲಿ 97 ರನ್ ಗಳನ್ನು ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್ ಐಪಿಎಲ್ ಇತಿಹಾಸದಲ್ಲೇ ನಾನು ಕಂಡ ಅದ್ಭುತ ಇನ್ನಿಂಗ್ಸ್, ರಿಷಭ್ ಪಂತ್ ಅವರ ಅದ್ಭುತ ಆಟ ಎಂದು ಹಾಡಿಹೊಗಳಿದ್ದಾರೆ.
ರಿಷಭ್ ಪಂತ್ ಭರ್ಜರಿ ಬೌಂಡರ್ ಮತ್ತು ಸಿಕ್ಸರ್ ನೊಂದಿಗೆ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಅವರು 43 ಎಸೆತಗಳಲ್ಲಿ 97 ರನ್ ಗಳನ್ನು ಸಿಡಿಸಿದ್ದರು. ರಿಷಭ್ ಪಂತ್ ಅವರ ಉತ್ಯುತ್ತಮ ಆಟವನ್ನು ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸೌರವ್ ಗಂಗೂಲಿ ಸೇರಿದಂತೆ ಹಲವರು ಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sachin Tendulkarಸಚಿನ್ ತೆಂಡೂಲ್ಕರ್ಡೆಲ್ಲಿ ಡೇರ್ ಡೆವಿಲ್ಸ್Delhi DaredevilsRishabh Pantಐಪಿಎಲ್ 2017IPL 2017ರಿಷಭ್ ಪಂತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


