ಆದಾಯ ನಷ್ಟ: ಭಾರತದಿಂದ 60 ದಶಲಕ್ಷ ಪರಿಹಾರ ಕೇಳಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ದ್ವಿಪಕ್ಷೀಯ ಸರಣಿಗಳನ್ನು ಆಡುವ ಒಪ್ಪಂದವನ್ನು ಪಾಲಿಸಲು ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ...

Published On :
ಕರಾಚಿ: ದ್ವಿಪಕ್ಷೀಯ ಸರಣಿಗಳನ್ನು ಆಡುವ ಒಪ್ಪಂದವನ್ನು ಪಾಲಿಸಲು ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ಮಂಡಳಿಗೆ ನಿನ್ನೆ ನೊಟೀಸ್ ಕಳುಹಿಸಿದೆ. ಇದರಿಂದ ತಮಗೆ 60 ದಶಲಕ್ಷ ನಷ್ಟವಾಗುತ್ತದೆ ಎಂದು ಅದು ಹೇಳಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜೊತೆಗೆ 2014ರಲ್ಲಿ ನಿಲುವಳಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಅದರ ಪ್ರಕಾರ, ಎರಡೂ ರಾಷ್ಟ್ರಗಳು ಆರು ಸರಣಿಗಳನ್ನು ಆಡಬೇಕಿದೆ. 2015ರಿಂದ 2023ರ ಮಧ್ಯೆ 4 ಸರಣಿ ಪಂದ್ಯಗಳನ್ನು ಪಾಕಿಸ್ತಾನ ಆಯೋಜಿಸಬೇಕು.
ಆದರೆ ಭಾರತ ಮತ್ತು ಪಾಕಿಸ್ತಾನ ಮಧ್ಯೆ ರಾಯಭಾರ ಸಂಬಂಧಗಳು ಹದಗೆಟ್ಟಿರುವುದರಿಂದ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದರಿಂದ ಪಂದ್ಯಗಳಿಗೆ ಅನುಮೋದನೆ ನೀಡಲು ಭಾರತ ನಿರಾಕರಿಸುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಹರ್ಯಾರ್ ಖಾನ್, ಪಾಕಿಸ್ತಾನಕ್ಕೆ ಭಾರೀ ಹಣ ನಷ್ಟವಾಗಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಗೆ ಲೀಗಲ್ ನೊಟೀಸ್ ಕಳುಹಿಸುವ ಮೂಲಕ ನಾವು ಕಾನೂನು ಸಮರಕ್ಕೆ ಇಳಿದಿದ್ದೇವೆ ಎಂದು ಖಾನ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಭಾರತ ಯುನೈಟೆಡ್ ಅರಬ್ ಎಮಿರೇಟ್ಸ್ ಅಥವಾ ಶ್ರೀಲಂಕಾದಲ್ಲಿ ಕೂಡ ಆಟವಾಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿದರು.
ಪಾಕಿಸ್ತಾನ ಈ ವರ್ಷದ ಅಂತ್ಯದ ತಿಂಗಳುಗಳಲ್ಲಿ ಭಾರತದೊಂದಿಗೆ ಸರಣಿ ಆಡಬೇಕಿದೆ. ಆದರೆ 2008ರ ಮುಂಬೈ ಸ್ಫೋಟದ ನಂತರ ದ್ವಿಪಕ್ಷೀಯ ಸರಣಿಯನ್ನು ಭಾರತ ನಿರಾಕರಿಸುತ್ತಾ ಬಂದಿದೆ.
2012ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಆದರೆ 2007ರಿಂದ ಇಲ್ಲಿಯವರೆಗೆ ಎರಡೂ ದೇಶಗಳ ತಂಡಗಳು ಸಂಪೂರ್ಣವಾಗಿ ಸರಣಿ ಆಟವಾಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತlegal noticePakistan Cricket Boardಪಾಕಿಸ್ತಾನ ಕ್ರಿಕೆಟ್ ಮಂಡಳಿbilateral seriesದ್ವಿಪಕ್ಷೀಯ ಸರಣಿಲೀಗಲ್ ನೊಟೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


