ಆಸ್ಟ್ರೇಲಿಯಾ ಕ್ರಿಕೆಟಿಗ ಶಾನ್ ಟೈಟ್ ಈಗ ಭಾರತೀಯ ನಾಗರಿಕ!
ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶಾನ್ ಟೈಟ್ ಸಾಗರೋತ್ತರ ಭಾರತೀಯ ನಾಗರಿಕ ಪಾಸ್ ಪೋರ್ಟ್ ಪಡೆದಿದ್ದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ...

Published On :
ಮುಂಬೈ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶಾನ್ ಟೈಟ್ ಸಾಗರೋತ್ತರ ಭಾರತೀಯ ನಾಗರಿಕ ಪಾಸ್ ಪೋರ್ಟ್ ಪಡೆದಿದ್ದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಶಾನ್ ಟೈಟ್ 2010ರಲ್ಲಿ ಐಪಿಎಲ್ ಕೂಟದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಈ ವೇಳೆ ರೂಪದರ್ಶಿ, ವೈನ್ ಉದ್ಯಮಿ ಮಾಶೂಮ್ ಸಿಂಘಾ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ 2014ರಲ್ಲಿ ಮದುವೆ ಮೂಲಕ ಇವರಿಬ್ಬರು ಪತಿ ಪತ್ನಿಯರಾದರು. ಇದಾದ ಬಳಿಕ ಟೈಟ್ ಗೆ ಭಾರತದ ಜತೆಗಿನ ಒಡನಾಟ ಹೆಚ್ಚಾಯಿತು. ಭಾರತದ ಪೌರತ್ವ ಪಡೆಯುವ ಹಂಬಲವೂ ಹೆಚ್ಚಾಯಿತು.
ಶಾನ್ ಟೈಟ್ ಗೆ ನಾಗರಿಕ ಪಾಸ್ ಪೋರ್ಟ್ ಸಿಕ್ಕಿದ್ದರು. ಮೂಲಭೂತ ಹಕ್ಕಗಳಲ್ಲಿ ಒಂದಾಗಿರುವ ಮತದಾನದ ಹಕ್ಕು ಶಾನ್ ಟೈಟ್ ಗೆ ಇರುವುದಿಲ್ಲ. ಮುಂದಿನ 5 ವರ್ಷ ಬಳಿಕ ಅವರು ಒಂದು ವೇಳೆ ಪೂರ್ಣ ನಾಗರಿಕ ಹಕ್ಕು ಬಯಸಿ ಅರ್ಜಿ ಹಾಕಿದರಷ್ಟೇ ಸಂಪೂರ್ಣ ನಾಗರಿಕ ಹಕ್ಕು ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾAustraliaShaun TaitOverseas Citizen Of Indiaಶಾನ್ ಟೈಟ್ಸಾಗರೋತ್ತರ ಭಾರತೀಯ ನಾಗರಿಕ ಪಾಸ್ ಪೋರ್ಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


