ಕೊಹ್ಲಿಯನ್ನು ಅಣುಕಿಸಿ ಟೀಕೆಗೆ ಗುರಿಯಾದ ಸ್ಟೀವ್ ಸ್ಮಿತ್, ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಭುಜದ ನೋವಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಅಣುಕಿಸಿದ...

Published On :
ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಭುಜದ ನೋವಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಅಣುಕಿಸಿದ ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಸ್ಟಿವ್ ಸ್ಮಿತ್ ಟೀಕೆಗೆ ಗುರಿಯಾಗಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಫಿಲ್ಡಿಂಗ್ ಮಾಡುತ್ತಿದ್ದ ವೇಳೆ ಕೊಹ್ಲಿ ಬೌಂಡರಿಯಲ್ಲಿ ಚೆಂಡನ್ನು ಹಿಡಿಯಲು ಹಾರಿದ್ದರು ಈ ವೇಳೆ ಅವರ ಭುಜ ನೆಲಕ್ಕೆ ತಗುಲಿ ಭುಜದ ನೋವಿಗೆ ಒಳಗಾಗಿದ್ದರು. ಇದರಿಂದಾಗಿ ಮೊದಲ ಹಾಗೂ ಎರಡನೇ ದಿನ ಅವರು ಫೀಲ್ಡಿಂಗ್ ಮಾಡಿರಲಿಲ್ಲ.
ಆದರೆ ನೋವಿನ ನಡುವೆಯೂ ಮೂರನೇ ದಿನ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 23 ಎಸೆತಗಳನ್ನು ಎದುರಿಸಿ 6 ರನ್ ಗಳಿಸಿದ್ದಾಗ ಕಮ್ಮಿನ್ಸ್ ಎಸೆತದಲ್ಲಿ ಸ್ಟಿವ್ ಸ್ಮಿತ್ ಗೆ ಕ್ಯಾಚ್ ನೀಡಿ ಔಟಾಗಿದ್ದರು. ಈ ವೇಳೆ ಕ್ಯಾಚ್ ಹಿಡಿದಿದ್ದ ಸ್ಮಿತ್ ತಮ್ಮ ಭುಜವನ್ನು ಹಿಡಿದುಕೊಂಡು ಕೊಹ್ಲಿಯನ್ನು ಅಣುಕಿಸಿದ್ದರು. ಬಳಿಕ ಫೀಲ್ಡಿಂಗ್ ಮಾಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಬೌಂಡರಿ ಲೈನ್ ನಲ್ಲಿ ಬಾಲ್ ತಡೆದ ನಂತರ ಭುಜದ ನೋವಿಗೆ ಒಳಗಾಗಿರುವ ಹಾಗೇ ಕೊಹ್ಲಿಯನ್ನು ಅಣಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaVirat Kohliವಿರಾಟ್ ಕೊಹ್ಲಿGlenn Maxwellಗ್ಲೆನ್ ಮ್ಯಾಕ್ಸ್‌ವೆಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


