"ವಿರಾಟ್" ನಿವೃತ್ತಿ: ಟ್ವಿಟರ್ ನಲ್ಲಿ ವೈರಲ್ ಆದ ಸೆಹ್ವಾಗ್ ಟ್ವೀಟ್!
ಮಾಜಿ ಕ್ರಿಕೆಟಿಗೆ ವೀರೇಂದ್ರ ಸೆಹ್ವಾಗ್ ಮಾಡಿದ್ದ ಟ್ವೀಟ್ ವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ನವದೆಹಲಿ: ಮಾಜಿ ಕ್ರಿಕೆಟಿಗೆ ವೀರೇಂದ್ರ ಸೆಹ್ವಾಗ್ ಮಾಡಿದ್ದ ಟ್ವೀಟ್ ವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ಭಾರತ ಮತ್ತು ವಿಶ್ವದ ಅತ್ಯಂತ ಹಳೆಯ ಯುದ್ಧ ನೌಕೆ ಐಎನ್ಎಸ್ ವಿರಾಟ್ ಇಂದು ಅಧಿಕೃತವಾಗಿ ಸೇವೆಗೆ ವಿದಾಯ ಹೇಳುತ್ತಿದ್ದು, ಇದೇ ವಿಚಾರದ ಹಿನ್ನಲೆಯಲ್ಲಿ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ವಿರಾಟ್ ನಿವೃತ್ತರಾಗುತ್ತಿದ್ದಾರೆ.. ಅತ್ಯಂತ ಹಳೆಯ ಯುದ್ಧ ನೌಕೆಗೆ ಎಂದಿಗೂ ಕೊನೆ ಇಲ್ಲ. 30 ವರ್ಷಗಳ ಸಾರ್ಥಕ ಸೇವೆಯ ಬಳಿಕವೂ ಎಂದೆಂದಿಗೂ ನಮ್ಮ ಮನದಲ್ಲಿ ಐಎನ್ಎಸ್ ವಿರಾಟ್ ಇರುತ್ತದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು.
ಆದರೆ ಸೆಹ್ವಾಗ್ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಟ್ವೀಟಿಗರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿವೃತ್ತಿ ಕುರಿತಂತೆ ಸೆಹ್ವಾಗ್ ಮಾತನಾಡುತ್ತಿದ್ದಾರೆ ಎಂದು ಭಾವಿಸಿ ಟ್ವಿಟರ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದರು. ಬಳಿಕ ಐಎನ್ಎಸ್ ವಿರಾಟ್ ಯುದ್ಧನೌಕೆಯ ನಿವೃತ್ತಿ ಎಂದು ಮನವರಿಕೆ ಮಾಡಿಕೊಂಡಿದ್ದಾರೆ.
ಪ್ರತೀ ಭಾರಿ ತಮ್ಮ ವಿಶೇಷ ಟ್ವೀಟ್ ಗಳ ಮೂಲಕ ಗಮನ ಸೆಳೆಯುವ ಸೆಹ್ವಾಗ್ ಈ ಬಾರಿಯೂ ಮತ್ತೊಂದು ಟ್ವೀಟ್ ನ ಮೂಲಕ ಟ್ವೀಟಿಗರ ಗಮನ ಸೆಳೆದಿದ್ದಾರೆ. ಇದೀಗ ಸೆಹ್ವಾಗ್ ಮಾಡಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@virendersehwag the 1st 3 words gave me a heart attack!!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


