ಜೈಪುರ ಟ್ರಾಫಿಕ್ ಪೊಲೀಸ್ ಹೋರ್ಡಿಂಗ್: ಅಪಹಾಸ್ಯ ಕುರಿತು ಕ್ರಿಕೆಟರ್ ಬುಮ್ರಾ ಅಸಮಾಧಾನ!
ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.

Published On :
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸತತ ನೋಬಾಲ್ ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣರಾಗಿದ್ದ ಭಾರತೀಯ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಇದೀಗ ಜೈಪುರ ಟ್ರಾಫಿಕ್ ಪೊಲೀಸರಿಂದ ಅಪಹಾಸ್ಯಕ್ಕೀಡಾಗಿದ್ದಾರೆ.
ಜೈಪುರದ ಪ್ರಮುಖ ರಸ್ತೆಯೊಂದರಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿರುವ ಸಂಚಾರ ನಿಯಮ ಪಾಲನೆಯ ಹೋರ್ಡಿಂಗ್ಸ್ ನಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟ ಹಾಕಿ, ಗೆರೆ ದಾಟಬೇಡಿ..ಇದು ದುಬಾರಿಯಾಗಬಹುದು ಎಂದು ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಇದೀಗ ಈ ಹೋರ್ಡಿಂಗ್ಸ್ ವ್ಯಾಪಕ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಬುಮ್ರಾ ಜೈಪುರ ಪೊಲೀಸರ ವಿರುದ್ಧ ಕಿಡಿಕಾರಿದ್ದು, ದೇಶಕ್ಕಾಗಿ ಆಡುತ್ತಿರುವ ಓರ್ವ ಆಟಗಾರನನ್ನು ನೀವೆಷ್ಟು ಗೌರವಿಸುತ್ತೀರಿ ಎಂಬುದು ಇದರಿಂದ ಸಾಬೀತಾಗಿದೆ. ಚಿಂತೆ ಬೇಡ ನಿಮ್ಮ ತಪ್ಪುಗಳನ್ನು ನಾನು ಮುಂದಿಟ್ಟುಕೊಂಡು ಹಾಸ್ಯ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಜೂನ್ 18ರಂದು ನಡೆದು ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಈ ಪಂದ್ಯದಲ್ಲಿ ಭಾರತ ಪಾಕ್ ಎದುರು 180 ರನ್‌ಗಳಿಂದ ಸೋತಿತ್ತು. ಮೊದಲ ಬ್ಯಾಟಿಂಗ್ ಆರಂಭಿಸಿದ ಪಾಕ್‌ನ ಆರಂಭಿಕ ಆಟಗಾರ ಫಖರ್ ಜಮಾನ್ ಬುಮ್ರಾ ಎಸೆದ ಓವರ್‌ನಲ್ಲಿ ಔಟ್ ಆಗಿದ್ದರು. ಆದರೆ, ಅದು ನೋಬಾಲ್ ಆಗಿತ್ತು. ಈ ಹಂತದಲ್ಲಿ ಜೀವದಾನ ಪಡೆದ ಫಖರ್ ಜಮಾನ್ ಶತಕ (114) ಸಿಡಿಸಿ ಸಂಭ್ರಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew DelhiJasprit Bumrahಜಸ್ ಪ್ರೀತ್ ಬುಮ್ರಾICC Champions Trophyಐಸಿಸಿ ಚಾಂಪಿಯನ್ಸ್ ಟ್ರೋಫಿJaipur traffic policeಜೈಪುರ ಟ್ರಾಫಿಕ್ ಪೊಲೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


