ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಅರ್ಜಿ ಸಲ್ಲಿಸಲು ಸಿದ್ಧ, ಆದರೆ ಒಂದೇ ಒಂದು ಷರತ್ತು!
ನೂತನ ಟೀಂ ಕೋಚ್ ಹುದ್ದೆಗೆ ಒಂದೇ ಒಂದು ಷರತ್ತಿನ ಮೇರೆಗೆ ಅರ್ಜಿ ಸಲ್ಲಿಸಲು ಸಿದ್ಧ ಎಂದು ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಹೇಳಿದ್ದಾರೆ.

ನವದೆಹಲಿ: ನೂತನ ಟೀಂ ಕೋಚ್ ಹುದ್ದೆಗೆ ಒಂದೇ ಒಂದು ಷರತ್ತಿನ ಮೇರೆಗೆ ಅರ್ಜಿ ಸಲ್ಲಿಸಲು ಸಿದ್ಧ ಎಂದು ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಹೇಳಿದ್ದಾರೆ.
ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜಿನಾಮೆ ನೀಡಿದ ಬಳಿಕ ನೂತನ ಕೋಚ್ ಆಯ್ಕೆ ಪ್ರಕ್ರಿಯೆಗೆ ಬಿಸಿಸಿಐ ಚಾಲನೆ ನೀಡಿತ್ತಾದರೂ, ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ ಮತ್ತೆ ಅರ್ಜಿ ಆಹ್ವಾನಿಸಿದೆ. ಅಲ್ಲದೆ ರವಿಶಾಸ್ತ್ರಿ ಅವರನ್ನೂ ಕೂಡ ಅರ್ಜಿ ಸಲ್ಲಿಸುವಂತೆ ಕೇಳಿತ್ತು. ಆದರೆ ಕಳೆದ ಬಾರಿಯ ಹಿನ್ನಡೆಯಿಂದಾಗಿ ಮುಖಭಂಗ ಅನುಭವಿಸಿದ್ದ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಹೊಸದೊಂದು ಷರತ್ತು ವಿಧಿಸಿದ್ದಾರೆ. ಅದರನ್ವಯ ಬಿಸಿಸಿಐ ತಮ್ಮನ್ನು ಕೋಚ್ ಆಗಿ ಆಯ್ಕೆ ಮಾಡುವ ಭರವಸೆ ನೀಡಿದರಷ್ಟೇ ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಾ ಹೇಳಿದ್ದಾರೆ.
ಕಳೆದ ಭಾರಿ ಟೀಂ ಇಂಡಿಯಾ ಕೋಚ್ ಸ್ಥಾನಕ್ಕಾಗಿ ರವಿಶಾಸ್ತ್ರಿ ಅರ್ಜಿ ಸಲ್ಲಿಕೆ ಮಾಡಿದ್ದರಾದರೂ, ಅಂದು ಕೋಚ್ ಹುದ್ದೆಯ ಆಕಾಂಕ್ಷಿಗಳ ಸಂದರ್ಶನ ಪಡೆದ ಸಿಎಸಿ ಸದಸ್ಯರಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಕುಂಭ್ಲೆ ಅವರನ್ನು ನೂತನ ಕೋಚ್ ಆಗಿ ಆಯ್ಕೆ ಮಾಡಿದ್ದರು. ಅಂದಿನ ಕೋಚ್ ಆಯ್ಕೆ ಪ್ರಕ್ರಿಯೆ ವೇಳೆ ಶಾಸ್ತ್ರಿ ಅವರ 2 ವರ್ಷಗಳ ನಿರ್ದೇಶಕ ಸ್ಥಾನದ ಅನುಭವದ ಹೊರತಾಗಿಯೂ ಶಾಸ್ತ್ರಿ ಅವರನ್ನು ಪಕ್ಕಕ್ಕಿಟ್ಟು, ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಅಂದು ಸಚಿನ್ ರವಿಶಾಸ್ತ್ರಿ ಪರವಾಗಿ ಮತ ಹಾಕಿದ್ದರೆ, ಗಂಗೂಲಿ ಕುಂಬ್ಳೆ ಪರವಾಗಿ ಮತಹಾಕಿದ್ದರಂತೆ. ಹೀಗಾಗಿ ಲಕ್ಷ್ಮಣ್ ಅವರ ಮತ ನಿರ್ಣಾಯಕವಾಗಿ ಅವರೂ ಕೂಡ ಕುಂಬ್ಳೆ ಪರವಾಗಿ ಮತಹಾಕಿದ್ದರಿಂದ ಕೋಚ್ ಹುದ್ದೆ ಕುಂಬ್ಳೆ ಪಾಲಾಗಿತ್ತು.
ಹೀಗಾಗಿ ಅಂದು ಮುಖಭಂಗ ಅನುಭವಿಸಿದ್ದ ರವಿಶಾಸ್ತ್ರಿ ಮತ್ತೆ ಅಂತಹ ಸ್ಥಿತಿ ಎದುರಾಗದರಲಿ ಎನ್ನುವ ಕಾರಣಕ್ಕೆ ಇಂತಹುದೊಂದು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಮೂಲಗಳ ಬಿಸಿಸಿಐ ಆಹ್ವಾನದ ಮೇರೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಕರ್ನಾಟಕದ ಮಾಜಿ ಆಟಗಾರ ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಟಾಮ್ ಮೂಡಿ ಮತ್ತು ರಿಚರ್ಡ್ ಪೈಬುಸ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


