ಕೊಹ್ಲಿ ವೇತನದ ಶೇ. 60ರಷ್ಟು ವೇತನಕ್ಕೆ ಕುಂಬ್ಳೆ ಬೇಡಿಕೆ!
ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರು ತಂಡದ ನಾಯಕನ ವೇತನದ ಶೇಖಡ 60ರಷ್ಟು ಭಾಗ ಮುಖ್ಯ ಕೋಚ್ಗೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು...

Published On :
ನವದೆಹಲಿ: ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರು ತಂಡದ ನಾಯಕನ ವೇತನದ ಶೇಖಡ 60ರಷ್ಟು ಭಾಗ ಮುಖ್ಯ ಕೋಚ್ಗೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ.
ಅನಿಲ್ ಕುಂಬ್ಳೆ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ 19 ಪುಟಗಳ ಪ್ರಸ್ತಾಪ ಸಲ್ಲಿಸಿದ್ದು ಅದರಲ್ಲಿ ಟೀಂ ಇಂಡಿಯಾದ ನಾಯಕ ಪಡೆಯುತ್ತಿರುವ ವಾರ್ಷಿಕ ವೇತನದಲ್ಲಿ ಶೇಕಡ 60ರಷ್ಟು ಮುಖ್ಯ ಕೋಚ್ ಗಳಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯ ಫೈನಲ್ ಪಂದ್ಯ ಮೇ 21ರಂದು ನಡೆದಿದ್ದು ಅಂದು ಅನಿಲ್ ಕುಂಬ್ಳೆ ನಿರ್ವಾಹಕ ಸಮಿತಿ(ಸಿಒಎ) ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅದರಲ್ಲಿ ಆಟಗಾರರಿಗೆ ಫಿಟ್ನೆಸ್ ಗಾಗಿ ಶೇಕಡ 20ರಷ್ಟು ಹೆಚ್ಚುವರಿ ವೇತನ. ಜತೆಗೆ ತಂಡದ ಬೆಂಬಲ ಸಿಬ್ಬಂದಿಗೂ ವೇತನ ಹೆಚ್ಚಿಸುವಂತೆ ಕುಂಬ್ಳೆ ಮನವಿ ಮಾಡಿದ್ದರು.
ಮುಖ್ಯ ಕೋಚ್ ಗೆ 6.5 ಕೋಟಿ ವೇತನ ನೀಡುತ್ತಿದ್ದು ಅದನ್ನು 7.5 ಕೋಟಿಗೆ ಹೆಚ್ಚಿಸಬೇಕು. ಇನ್ನು ಶೇಕಡ 30ರಷ್ಟು ವೇತನ ಬೌನಸ್ ಮತ್ತು ತಂಡದ ಉತ್ತಮ ಪ್ರದರ್ಶನ ಅನ್ವಯ ನೀಡಬೇಕು ಎಂದು ಕುಂಬ್ಳೆ ಪ್ರಸ್ತಾವನೆಯಲ್ಲಿ ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


