ಕುಂಬ್ಳೆ ಆಟಗಾರರಿಗೆ ಮಕ್ಕಳಿಗೆ ಬೈದಂತೆ ಬೈಯುತ್ತಿದ್ದರಂತೆ: ವರದಿ
ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕೋಚ್ ಮತ್ತು ಆಟಗಾರರ ನಡುವಿನ ಜಗಳಕ್ಕೆ ಕಾರಣವಾಗಿರಬಹುದಾದ ಒಂದೊಂದೇ ಅಂಶಗಳು ಬೆಳಕಿಗೆ ಬರತೊಡಗಿವೆ.

ನವದೆಹಲಿ: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ರಾಜಿನಾಮೆ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕೋಚ್ ಮತ್ತು ಆಟಗಾರರ ನಡುವಿನ ಜಗಳಕ್ಕೆ ಕಾರಣವಾಗಿರಬಹುದಾದ ಒಂದೊಂದೇ ಅಂಶಗಳು ಬೆಳಕಿಗೆ ಬರತೊಡಗಿವೆ.
ಬಿಸಿಸಿಐ ಮೂಲಗಳ ಪ್ರಕಾರ ನಾಯಕ ಕೊಹ್ಲಿ ಹಾಗೂ ಕೋಚ್ ಕುಂಬ್ಳೆ ನಡುವಿನ ಜಗಳಕ್ಕೆ ಕುಂಬ್ಳೆ ಅವರ ಬೈಗುಳಗಳೇ ಪ್ರಮುಖ ಕಾರಣವಂತೆ. ಬಿಸಿಸಿಐನ ಅಧಿಕಾರಿಯೊಬ್ಬರೊಂದಿಗೆ ಆಟಗಾರರೊಬ್ಬರು ಈ ಬಗ್ಗೆ ಹೇಳಿಕೊಂಡಿದ್ದು ಕೋಚ್ ಕುಂಬ್ಳೆ ಆಟಗಾರರಿಗೆ ಮಕ್ಕಳಿಗೆ ಬೈದಂತೆ ಬೈಯುತ್ತಿದ್ದರಂತೆ. ಸ್ವತಃ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಇದರಿಂತ ಹೊರತಾಗಿರಲಿಲ್ಲವಂತೆ. ಸಾಕಷ್ಟು ಬಾರಿ ಕೊಹ್ಲಿ ಕೂಡ ಕುಂಬ್ಳೆ ಕೋಪಕ್ಕೆ ತುತ್ತಾಗಿ ಬೈಯಿಸಿಕೊಳ್ಳುತ್ತಿದ್ದರಂತೆ.
ಆಟಗಾರರು ಕುಂಬ್ಳೆ ನಮ್ಮನ್ನು ಶಾಲಾ ಮಕ್ಕಳಂತೆ ಕಾಣುತ್ತಿದ್ದರು. ನಮಗೆ ಗೊತ್ತಿಲ್ಲದೆ ತಪ್ಪು ಮಾಡಿದರೂ ಮಕ್ಕಳಿಗೆ ಬೈದಂತೆ ಬೈಯುತ್ತಿದ್ದರು ಎಂದು ಆಟಗಾರರು ಬಿಸಿಸಿಐ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದ ಕುಂಬ್ಳೆ
ಇನ್ನು ಮತ್ತೊಂದು ಪ್ರಕರಣದಲ್ಲಿ ಪಾಕಿಸ್ತಾನದ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಕೋಚ್ ಅನಿಲ್ ಕುಂಬ್ಳೆ ಅವರ ಇಚ್ಛೆಯಾಗಿತ್ತು. ಆದರೆ ಅಂದು ನಾಯಕ ಕೊಹ್ಲಿ ತೀರ್ಮಾನವೇ ಅಂತಿಮವಾಗಿತ್ತು.
ಡ್ರೆಸಿಂಗ್ ರೂಮ್ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೊಹ್ಲಿ-ಕುಂಬ್ಳೆ ಪೈಪೋಟಿ
ಏತನ್ಮಧ್ಯೆ ಟೀಂ ಇಂಡಿಯಾದ ಡ್ರೆಸಿಂಗ್ ರೂಮಿನಲ್ಲಿ ತಾವು ಹೇಳಿದ್ದೇ ನಡೆಯಬೇಕು ಎಂಬುದು ಕೊಹ್ಲಿ ಮನೋಭಾವವಾದರೆ, ತಮ್ಮ ನಿರ್ಧಾರದಂತೆ ಆಟಗಾರರು ನಡೆಯಬೇಕು ಎಂದು ಕುಂಬ್ಳೆ ಆಶಿಸಿದ್ದರಂತೆ. ಇಂತಹ ಭಿನ್ನಾಭಿಪ್ರಾಯಗಳು ಟೀಂ ಇಂಡಿಯಾದ ಆಸ್ಟ್ರೇಲಿಯಾದ ಭಾರತದ ಪ್ರವಾಸದ ಸರಣಿ ವೇಳೆಯಲ್ಲೇ ಆರಂಭವಾಗಿತ್ತು ಎಂದು ಆಟಗಾರರಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


