ಭಾರತದ ವೆಸ್ಚ್ ಇಂಡೀಸ್ ಪ್ರವಾಸ: ವಿಂಡೀಸ್ ತಂಡ ಪ್ರಕಟ!
ಮುಂಬರುವ ಭಾರತ ತಂಡದ ವಿಂಡೀಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಈ ಹಿಂದೆ ಆಫ್ಘಾನಿಸ್ತಾದ ವಿರುದ್ಧ ಆಡಿದ್ದ ಅದೇ ತಂಡವನ್ನು ಭಾರತದ ವಿರುದ್ಧದ ಟೂರ್ನಿಗೂ ಉಳಿಸಿಕೊಳ್ಳಲಾಗಿದೆ.

ಪೋರ್ಟ್ ಆಫ್ ಸ್ಪೈನ್: ಮುಂಬರುವ ಭಾರತ ತಂಡದ ವಿಂಡೀಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಈ ಹಿಂದೆ ಆಫ್ಘಾನಿಸ್ತಾದ ವಿರುದ್ಧ ಆಡಿದ್ದ ಅದೇ ತಂಡವನ್ನು ಭಾರತದ ವಿರುದ್ಧದ ಟೂರ್ನಿಗೂ ಉಳಿಸಿಕೊಳ್ಳಲಾಗಿದೆ.
ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತದ ವಿರುದ್ಧದ ಸರಣಿ ಅತೀ ಮುಖ್ಯವಾಗಿದ್ದು, ಅರ್ಹತಾ ಸುತ್ತಿಲ್ಲದೇ ಐಸಿಸಿ ಟೂರ್ನಮೆಂಟ್ ಗಳಲ್ಲಿ ಸ್ಥಾನ ಪಡೆಯಲು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಭಾರತ ತಂಡ ಪ್ರಸ್ತುತ 3ನೇ ಸ್ಥಾನದಲ್ಲಿದ್ದು, 116 ಅಂಕಗಳನ್ನು ಗಳಿಸಿದೆ. ವೆಸ್ಟ್ ಇಂಡೀಸ್ ತಂಡ ಕೇವಲ 77 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಭಾರತದ ವಿರುದ್ಧ ಸರಣಿ ಗೆದ್ದರೆ ವಿಂಡೀಸ್ ಅಂಕಗಳಲ್ಲಿ ಏರಿಕೆಯಾಗಲಿದ್ದು, ರ್ಯಾಂಕಿಂಗ್ ನಲ್ಲಿಯೂ ಬದಲಾವಣೆ ನೋಡಬಹುದಾಗಿದೆ. 2019ರ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯಲು ವಿಂಡೀಸ್ ತಂಡ ಟಾಪ್ 8 ಸ್ಥಾನಗಳೊಳಗೆ ಸ್ಥಾನ ಪಡೆಯಬೇಕಿದೆ. ಹೀಗಾಗಿ ಜೇಸನ್ ಹೋಲ್ಡರ್ ಪಡೆಗೆ ಭಾರತದ ವಿರುದ್ಧ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಇದೇ ಜೂನ್ 23ರಿಂದ 5 ಪಂದ್ಯಗಳ ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಆರಂಭವಾಗಲಿದೆ.
ವಿಂಡೀಸ್ ತಂಡ ಇಂತಿದೆ:
ಜೇಸನ್ ಹೋಲ್ಡರ್ (ನಾಯಕ), ದೇವೇಂದ್ರ ಬಿಶೂ, ಜೋನಾಥನ್ ಕಾರ್ಟರ್, ರೋಸ್ಚನ್ ಚೇಸ್, ಮಿಗ್ಯುಯೆಲ್ ಕ್ಯುಮಿನ್ಸ್, ಶಾಯ್ ಹೋಪ್ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಎವಿನ್ ಲೂಯಿಸ್, ಜೇಸನ್ ಮಹಮದ್, ಆ್ಯಶ್ಲೆ ನರ್ಸ್, ಕೀರನ್ ಪಾವೆಲ್, ರಾವ್ಮನ್ ಪಾವೆಲ್, ಕೆಸ್ರಿಕ್ ವಿಲಿಯಮ್ಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


