ಚಾಂಪಿಯನ್ಸ್ ಟ್ರೋಫಿ ಫೈನಲ್ಸ್: ಭಾರತಕ್ಕೆ 339 ರನ್ ಗಳ ಗುರಿ ನೀಡಿದ ಪಾಕ್
ಚಾಂಪಿಯನ್ಸ್ ಟ್ರೋಫಿ 2017 ರ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 338 ರನ್ ಗಳನ್ನು ಗಳಿಸಿದ್ದು, ಭಾರತಕ್ಕೆ ಗೆಲ್ಲಲು 339 ರನ್ ಗಳ ಗುರಿ ನೀಡಿದೆ.

Published On :
ಲಂಡನ್: ಚಾಂಪಿಯನ್ಸ್ ಟ್ರೋಫಿ 2017 ರ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 338 ರನ್ ಗಳನ್ನು ಗಳಿಸಿದ್ದು, ಭಾರತಕ್ಕೆ ಗೆಲ್ಲಲು 339 ರನ್ ಗಳ ಗುರಿ ನೀಡಿದೆ.
ಫಖರ್ ಝಮಾನ್ (114) ಸ್ಫೋಟಕ ಆಟದ ನೆರವಿನಿಂದ ಪಾಕಿಸ್ತಾನ 338 ರನ್ ಗಳನ್ನು ಗಳಿಸಲು ಸಾಧ್ಯವಾಗಿದ್ದು, 3 ನೇ ಓವರ್ ನ 4 ನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅಜರ್ ಅಲಿ ವಿಕೆಟ್ ಪಡೆದಿದ್ದರಾದರೂ ನೋ ಬಾಲ್ ಆಗಿದ್ದರಿಂದ ಜೀವದಾನ ದೊರೆತು ಪಾಕ್ ಬ್ಯಾಟ್ಸ್ ಮನ್ ಗಳು ಹೆಚ್ಚು ಮೊತ್ತ ಗಳಿಸಲು ಕಾರಣವಾಯಿತು.
ಪ್ರಾರಂಭದಲ್ಲಿ ಭಾರತದ ಬೌಲರ್ ಗಳು ಪಾಕ್ ಬ್ಯಾಟ್ಸ್ ಮನ್ ಗಳ ಮೇಲೆ ನಿಯಂತ್ರಣ ಸಾಧಿಸಿದರಾದರೂ 4 ನೇ ಓವರ್ ನಂತರ ಭಾರತೀಯ ಬೌಲರ್ ಗಳು ಪಾಕ್ ಆಟಗಾರರನ್ನು ಹೆಚ್ಚು ರನ್ ಗಳಿಸದೇ ಇರುವಂತೆ ತಂತ್ರ ಹೆಣೆಯುವಲ್ಲಿ ವಿಫಲರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


