ಕ್ರಿಕೆಟ್

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ 300ನೇ ಏಕದಿನ ಪಂದ್ಯಕ್ಕೆ ಸಜ್ಜು

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 300ನೇ ಏಕದಿನ ಪಂದ್ಯ ಆಡಲಿದ್ದಾರೆ...

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ 300ನೇ ಏಕದಿನ ಪಂದ್ಯಕ್ಕೆ ಸಜ್ಜು
ಯುವರಾಜ್ ಸಿಂಗ್
Published On :
ಲಂಡನ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 300ನೇ ಏಕದಿನ ಪಂದ್ಯ ಆಡಲಿದ್ದಾರೆ. 
ಚಾಂಪಿಯನ್ಸ್ ಟ್ರೋಫಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯ ಇದಾಗಿದ್ದು ಯುವರಾಜ್ ಸಿಂಗ್ 300ನೇ ಪಂದ್ಯ ಎಂಬ ವಿಷಯವಾಗಿ ಈ ಪಂದ್ಯ ಬಾರಿ ಮಹತ್ವ ಪಡೆದುಕೊಂಡಿದೆ.  
35 ವರ್ಷದ ಯುವರಾಜ್ ಸಿಂಗ್ 300ನೇ ಪಂದ್ಯ ಆಡುವ ಮೂಲಕ ವಿಶ್ವದ 19ನೇ ಹಾಗೂ ಭಾರತದ 5ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 
ಭಾರತ ಪರ ಸಚಿನ್ ತೆಂಡೂಲ್ಕರ್(463), ರಾಹುಲ್ ದ್ರಾವಿಡ್(340), ಮೊಹಮ್ಮದ್ ಅಜರುದ್ದೀನ್(334) ಮತ್ತು ಸೌರವ್ ಗಂಗೂಲಿ(308) ಈ ಸಾಧನೆ ಮಾಡಿದ್ದರು. 
2000ದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೇ(ಆಗ ಐಸಿಸಿ ನಾಕೌಟ್ ಕಪ್) ಯುವರಾಜ್ ಸಿಂಗ್ ನೈರೋಬಿಯಾದಲ್ಲಿ ಆತಿಥೇಯ ಕೀನ್ಯಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 
17 ವರ್ಷಗಳ ವೃತ್ತಿ ಬದುಕಿನಲ್ಲಿ ಯುವರಾಜ್ ಸಿಂಗ್ ಪ್ರಸ್ತುತ 299 ಪಂದ್ಯಗಳನ್ನು ಆಡಿದ್ದು 14 ಶತಕ, 52 ಅರ್ಧಶತಕ ಸಿಡಿಸಿದ್ದಾರೆ. 36.84ರ ಸರಾಸರಿಯಲ್ಲಿ 8,622 ರನ್ ಮತ್ತು 111 ವಿಕೆಟ್ ಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.