ಕ್ರಿಕೆಟ್

ಮತ್ತೆ ಬಾಲ ಬಿಚ್ಚಿದ ಬಾಂಗ್ಲಾ ಕಿಡಿಗೇಡಿ ಕ್ರಿಕೆಟ್ ಅಭಿಮಾನಿಗಳು; ರಾಷ್ಟ್ರ ಧ್ವಜಕ್ಕೆ ಅಪಮಾನ!

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿಯಾಗತ್ತಿರುವ ಬೆನ್ನಲ್ಲೇ ಬಾಂಗ್ಲಾದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.

ಮತ್ತೆ ಬಾಲ ಬಿಚ್ಚಿದ ಬಾಂಗ್ಲಾ  ಕಿಡಿಗೇಡಿ ಕ್ರಿಕೆಟ್ ಅಭಿಮಾನಿಗಳು; ರಾಷ್ಟ್ರ ಧ್ವಜಕ್ಕೆ ಅಪಮಾನ!
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿವಾದಾತ್ಮಕ ಚಿತ್ರ
Published On :

ಢಾಕಾ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿಯಾಗತ್ತಿರುವ ಬೆನ್ನಲ್ಲೇ ಬಾಂಗ್ಲಾದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.

ವಿವಾದಿತ ಚಿತ್ರದಲ್ಲಿ ಹುಲಿಗೆ ಬಾಂಗ್ಲಾದೇಶದ ಭಾವುಟ ಹೊದಿಸಿ, ನಾಯಿಯೊಂದಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಹೊಂದಿಸಲಾಗಿದೆ. ಅಂತೆಯೇ ನಾಯಿಯನ್ನು ಹುಲಿ ಅಟ್ಟಾಡಿಸುತ್ತಿರುವಂತೆ ಚಿತ್ರ ಬಿಡಿಸಿ ಸಾಮಾಜಿಕ  ಜಾಲತಾಣಗಳಿಗೆ ಹರಿ ಬಿಟ್ಟಿದ್ದಾರೆ. ಇದೀಗ ಈ ಫೋಟೋ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹಿಂದೆಯೂ ಕೂಡ ಬಾಂಗ್ಲಾದೇಶದ ಕಿಡಿಗೇಡಿ ಅಭಿಮಾನಿಗಳು ಧೋನಿ ರುಂಡವನ್ನು ಬಾಂಗ್ಲಾದೇಶ ಬೌಲರ್ ಒಬ್ಬ ಹಿಡಿದಿರುವ ರೀತಿ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಇದಲ್ಲದೆ ಬಾಂಗ್ಲಾದೇಶದ  ಸ್ಥಳೀಯ ಪತ್ರಿಕೆಯೊಂದು ಭಾರತೀಯ ಕ್ರಿಕೆಟ್ ಆಟಗಾರರ ಅರ್ಧ ತಲೆ ಬೋಳಿಸಿ ಚಿತ್ರ ಪ್ರಕಟಿಸಿತ್ತು, ಬಾಂಗ್ಲಾ ಕ್ರಿಕೆಟಿಗನೋರ್ವ ಭಾರತೀಯ ಕ್ರಿಕೆಟಿಗರ ತಲೆ ಬೋಳಿಸಿದ ರೀತಿಯಲ್ಲಿ ಚಿತ್ರ ಪ್ರಕಟಿಸಿ ವಿವಾದಕ್ಕೀಡಾಗಿತ್ತು. ವ್ಯಾಪಕ  ವಿರೋಧದ ಬಳಿಕ ಆ ಚಿತ್ರವನ್ನು ಪತ್ರಿಕೆ ತೆಗೆದು ಹಾಕಿತ್ತು.

ಇದೀಗ ಮತ್ತೊಮ್ಮೆ ಕಿಡಿಗೇಡಿ ಬಾಂಗ್ಲಾದೇಶ ಅಭಿಮಾನಿಗಳು ಮತ್ತೆ ಭಾರತದ ಗೌರವಕ್ಕೆ ಧಕ್ಕೆ ತರುವಂತಹ ಚಿತ್ರ ಬಿಡಿಸಿ ಭಾರತೀಯರನ್ನು ಕೆಣಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.