ಡಕ್‌ವರ್ಥ್ ಲೂಯಿಸ್ ನಿಯಮ ಐಸಿಸಿಗೂ ಅರ್ಥವಾಗಿಲ್ಲ: ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಡಕ್‌ವರ್ಥ್ ಲೂಯಿಸ್ ನಿಮಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೂ ಅರ್ಥವಾಗಿರಲಿಕ್ಕಿಲ್ಲ...

Published On :
ಲಂಡನ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಡಕ್‌ವರ್ಥ್ ಲೂಯಿಸ್ ನಿಮಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೂ ಅರ್ಥವಾಗಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.
ಲಂಡನ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಯೋಜಿಸಿದ್ದ ನಿಧಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ನಿರೂಪಕ ಅಲನ್ ವಿಲ್ಕಿನ್ಸ್ ಧೋನಿಗೆ ಡಕ್‌ವರ್ಥ್ ಲೂಯಿಸ್ ನಿಯಮ ನಿಮಗೆ ಅರ್ಥವಾಗಿದೆಯಾ ಎಂದು ಕೇಳಿದರೂ ಇದಕ್ಕೆ ಧೋನಿ ಈ ನಿಯಮ ಐಸಿಸಿಗೂ ಅರ್ಥವಾಗಿರಲಿಕ್ಕಿಲ್ಲ ಎಂದು ತಟ್ಟನೆ ಪ್ರತಿಕ್ರಿಯಿಸಿದರು. ಇದು ಇಡೀ ಸಭೆಯನ್ನು ನಗೆಗಡಲಲ್ಲಿ ಮುಳುಗಿಸಿತು.
ಮಳೆ ಅಥವಾ ಇನ್ನಿತರೆ ಯಾವುದೇ ಕಾರಣಗಳಿಗಾಗಿ ಕ್ರಿಕೆಟ್ ಪಂದ್ಯ ನಿಂತರೆ ಡಕ್‌ವರ್ಥ್ ಲೂಯಿಸ್ ನಿಯಮವನ್ನು ಅನ್ವಯಿಸಿ ಫಲಿತಾಂಶ ನಿರ್ಣಯಿಸಲಾಗುತ್ತದೆ ಈ ನಿಯಮ ಸರಿಯಿಲ್ಲ ಎಂದು ಗೊಣಗುವವರ ಸಂಖ್ಯೆ ಜಾಸ್ತಿ ಇದೆ. ಇನ್ನು ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧದ ಪಂದ್ಯ ಭಾರತ ಡಕ್‌ವರ್ಥ್ ನಿಯಮದಡಿ 124 ರನ್ ಗಳಿಂದ ಗೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS Dhoniಐಸಿಸಿಎಂಎಸ್ ಧೋನಿICCDuckworth-Lewisಡಕ್‌ವರ್ಥ್ ಲೂಯಿಸ್Champions Trophy 2017ಚಾಂಪಿಯನ್ಸ್ ಟ್ರೋಫಿ 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


