"ಪ್ಯಾಡ್ ಕಟ್ಟಿ ಸಿದ್ಧನಾಗು": ಪಾಕ್ ಗೆ ಅಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯಾಗೂ ಶಾಕ್ ಕೊಟ್ಟ ಕೋಚ್ ಅನಿಲ್ ಕುಂಬ್ಳೆ!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ ಗಳನ್ನು ಎದುರಿಸಲು ಧೋನಿಗಿಂತ ಮೊದಲೇ ಹಾರ್ದಿಕ್ ಪಾಂಡ್ಯಾ ಕ್ರೀಸ್ ಗೆ ಆಗಮಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿರಬಹುದು. ಆದರೆ ಈ ಅಚ್ಚರಿ ನಿರ್ಧಾರದ ಹಿಂದೆ ಇರುವುದು ಕೋಚ್ ಅನಿಲ್ ಕುಂಬ್ಳೆ...

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ ಗಳನ್ನು ಎದುರಿಸಲು ಧೋನಿಗಿಂತ ಮೊದಲೇ ಹಾರ್ದಿಕ್ ಪಾಂಡ್ಯಾ ಕ್ರೀಸ್ ಗೆ ಆಗಮಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿರಬಹುದು. ಆದರೆ ಈ ಅಚ್ಚರಿ ನಿರ್ಧಾರದ ಹಿಂದೆ ಇರುವುದು ಕೋಚ್ ಅನಿಲ್ ಕುಂಬ್ಳೆ...
ಹೌದು..ಸಾದಾ ಕಾಲ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂತಹ ಅಚ್ಚರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ಧೋನಿಗಿಂತ ಮೊದಲೇ ಪಾಂಡ್ಯಾರನ್ನು ಕಣಕ್ಕಿಳಿಸುವ ಅಚ್ಚರಿ ನಿರ್ಧಾರ ಧೋನಿಯದ್ದೇ ಎಂದು ಭಾವಿಸಲಾಗಿತ್ತು. ಈ ಬಾರಿ ಕೊಂಚ ಬದಲಾವಣೆ ಎಂಬಂತೆ ಕೋಚ್ ಅನಿಲ್ ಕುಂಬ್ಳೆ ನಿರ್ಧಾರ ಕೈಗೊಂಡಿದ್ದು, ಧೋನಿಗಿಂತ ಮೊದಲೇ ಹಾರ್ದಿಕ್ ಪಾಂಡ್ಯಾ ಅವರನ್ನು ಕಣಕ್ಕಿಳಿಸಿದ ವಿಚಾರ ಇದೀಗ ಬಹಿರಂಗವಾಗಿದೆ.
ಈ ಬಗ್ಗೆ ಸ್ವತಃ ಹಾರ್ದಿಕ್ ಪಾಂಡ್ಯಾ ಮಾತನಾಡಿದ್ದು, ಪಂದ್ಯದ 46ನೇ ಓವರ್ ವರೆಗೂ ಕೋಚ್ ಕುಂಬ್ಳೆ ತಮಗೆ 4ನೇ ಕ್ರಮಾಂಕಕ್ಕೆ ಭಡ್ತಿ ನೀಡಲಿದ್ದಾರೆ ಎಂಬ ಮುನ್ಸೂಚನೆ ಕೂಡ ಇರಲ್ಲಿಲ್ಲವಂತೆ. "46ನೇ ಓವರ್ ನಡೆಯುತ್ತಿದ್ದ ವೇಳೆ ಯುವಿ ಔಟ್ ಆಗಿದ್ದರು. ನನ್ನ ಬಳಿ ಬಂದ ಕೋಚ್ ಅನಿಲ್ ಕುಂಬ್ಳೆ ನೆಕ್ಸ್ ನೀನು ಸಿದ್ಧನಾಗು..ಈಗಲೇ ಬ್ಯಾಡ್ ಕಟ್ಟಿ ಸಿದ್ಧನಾಗು ಎಂದರು. ಮರುಮಾತಿಲ್ಲದೇ ನಾನು ಕೂಡಲೇ ಪ್ಯಾಡ್ ಕಟ್ಟಿ ಸಿದ್ಧನಾದೆ. ನಾನು ಕ್ರೀಸ್ ಗೆ ತೆರಳುತ್ತಿದ್ದಾಗ ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು. ಕಾರಣ ಆ ಕ್ರಮಾಂಕದಲ್ಲಿ ಧೋನಿ ಆಡಬೇಕಿತ್ತು. ನಿಜವಾಗಿ ಹೇಳಬೇಕೆಂದರೆ ಸಾಕಷ್ಟು ಒತ್ತಡವಿತ್ತು. ಆದರೂ ಹೆಚ್ಚಿನ ಒತ್ತಡವನ್ನು ನನ್ನ ಮೇಲೆ ಹೇರಿಕೊಳ್ಳಲಿಲ್ಲ. ಇದೊಂದು ಸಾಮಾನ್ಯ ಪಂದ್ಯ ಎಂದು ಭಾವಿಸಿಯೇ ಕ್ರೀಸ್ ಗೆ ಆಗಮಿಸಿದ್ದೆ. ಬ್ಯಾಟಿಂಗ್ ಮಾಡುವಾಗಲೂ ಕೂಡ ಸಾಕಷ್ಟು ಶಾಂತವಾಗಿದ್ದೆ.
ಸಾಮಾನ್ಯವಾಗಿಯೇ ಪಾಕಿಸ್ತಾನ ವಿರುದ್ಧದ ಯಾವುದೇ ಪಂದ್ಯ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸುತ್ತದೆ. ಆಟಗಾರರ ಮೇಲೆ ಹಾಗೂ ಪ್ರೇಕ್ಷಕರ ಮೇಲೆ ಸಾಕಷ್ಟು ಒತ್ತಡ ನಿರೀಕ್ಷೆಗಳಿರುತ್ತವೆ. ಹೀಗಿದ್ದೂ ನಾನು ಶಾಂತವಾಗಿರಬೇಕು ಎಂದು ನಿರ್ಧರಿಸಿಯೇ ಕ್ರೀಸ್ ಗೆ ಆಗಮಿಸಿದ್ದೆ. ಅದರಂತೆಯೇ ತಂಡ ಉತ್ತಮ ರನ್ ಕಲೆ ಹಾಕಿತು. ಅದರಲ್ಲಿ ನನ್ನದೂ ಕೊಂಚ ಪಾಲಿದೆ.. ಅಂತೆಯೇ ಉತ್ತಮ ಪ್ರದರ್ಶನದಿಂದ ನಾವು ಪಂದ್ಯ ಗೆದ್ದೆವು ಎಂದು ಪಾಂಡ್ಯಾ ನಗುತ್ತಲೇ ಹೇಳಿದರು.
ಈ ಪಂದ್ಯದಲ್ಲಿ ಆಲ್ ರೌಂಡರ್ ಪಾಂಡ್ಯಾ ಕೇವಲ 8 ಎಸೆತಗಳಲ್ಲಿ ಬರೋಬ್ಬರಿ 20 ರನ್ ಗಳಿಸಿ ಭಾರತ ತಂಡ ಮುನ್ನೂರರ ಗಡಿ ದಾಟುವಲ್ಲಿ ಯಶಶ್ವಿಯಾಗುವಂತೆ ಮಾಡಿದರು, ತಾವಾಡಿದ ಮೊದಲ ಮೂರು ಎಸೆತಗಳನ್ನೇ ಪಾಂಡ್ಯಾ ಸಿಕ್ಸರ್ ಗೆ ಅಟ್ಟುವ ಮೂಲಕ ಪಾಕಿಸ್ತಾನ ತಂಡಕ್ಕೆ ಶಾಕ್ ನೀಡಿದರು. ಇನ್ನು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪಾಂಡ್ಯಾರನ್ನು ಮನಃಪೂರ್ವಕವಾಗಿ ಅಭಿನಂದಿಸಿದ ನಾಯಕ ವಿರಾಟ್ ಕೊಹ್ಲಿ ಪಾಂಡ್ಯಾಗೆ ಹತ್ತಕ್ಕೆ ಹತ್ತು ಅಂಕ ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


