ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕಳಪೆ ಆಟದಲ್ಲೂ ದಾಖಲೆ ಬರೆದ ಪಾಕ್ ಬೌಲರ್!
ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೀನಾಯವಾಗಿ ಸೋತಿದ್ದು, ಇದೇ ಪಾಕ್ ತಂಡದ ಬೌಲರ್ ಒಬ್ಬ ಕಳಪೆ ಪ್ರದರ್ಶನದಲ್ಲೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಬರ್ಮಿಂಗ್ ಹ್ಯಾಮ್: ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೀನಾಯವಾಗಿ ಸೋತಿದ್ದು, ಇದೇ ಪಾಕ್ ತಂಡದ ಬೌಲರ್ ಒಬ್ಬ ಕಳಪೆ ಪ್ರದರ್ಶನದಲ್ಲೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಲಂಡನ್ ನ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಭಾರತದ ಎದುರು ಪಾಕಿಸ್ತಾನ 124 ರನ್ ಗಳ ಹೀನಾಯ ಸೋಲು ಕಂಡಿದೆ. ಅಂತೆಯೇ ಇದೇ ಪಾಕ್ ತಂಡದ ಪ್ರಮುಖ ವೇಗಿಯೊಬ್ಬ ತನ್ನ ಕಳಪೆ ಪ್ರದರ್ಶನದಲ್ಲೂ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನದ ಪ್ರಮುಖ ವೇಗಿ ವಹಾಬ್ ರಿಯಾಜ್ ನಿನ್ನೆ ಭಾರತೀಯ ಬ್ಯಾಟ್ಸಮನ್ ಗಳಿಂದ ತೀವ್ರ ದಂಡನೆಗೆ ಒಳಗಾಗಿದ್ದರು.
ಪಂದ್ಯದಲ್ಲಿ 8.4 ಓವರ್ ಎಸೆದ ವಹಾಬ್ ರಿಯಾಜ್ ಬರೊಬ್ಬರಿ 87 ರನ್ ನೀಡಿದ್ದರು. ಇದು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಬೌಲರ್ ಒಬ್ಬನ ಕಳಪೆ ಪ್ರದರ್ಶನವಾಗಿ ದಾಖಲಾಗಿದೆ. ಇದಕ್ಕೂ ಮೊದಲು ಅಂದರೆ 2014ರಲ್ಲಿ ಜಿಂಬಾಬ್ವೆಯ ಬೌಲರ್ ತಿನಾಶೆ ಪಣ್ಯಾಂಗರ ಇಂಗ್ಲೆಂಡ್ ವಿರುದ್ಧ 86 ರನ್ ಗಳನ್ನು ನೀಡಿದ್ದರು. ಇದು ಈ ವರೆಗಿನ ಕಳಪೆ ಬೌಲಿಂಗ್ ಪ್ರದರ್ಶನದ ದಾಖಲೆಯಾಗಿತ್ತು. ಇದೀಗ ವಹಾಬ್ ರಿಯಾಜ್ 87 ರನ್ ನೀಡುವ ಮೂಲಕ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ.
ಮತ್ತೊಂದು ಪ್ರಮುಖ ಅಂಶವೆಂದರೆ ಈ ಪಂದ್ಯದಲ್ಲಿ ವಹಾಬ್ ಎಸೆದಿದ್ದು ಕೇವಲ 8.4 ಓವರ್ ಮಾತ್ರ. ಅವರ ಖಾತೆಯಲ್ಲಿ 1.2 ಓವರ್ ಬಾಕಿ ಇತ್ತು. ಹೀಗಾಗಿ ಅವರ ಮತ್ತಷ್ಟು ದಂಡನೆಗೆ ಒಳಗಾಗುವ ಅಪಾಯವಿತ್ತು. ಅಲ್ಲದೆ ಅಂತಿಮ ಓವರ್ ಗಳಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಆದರೆ 8.4 ಓವರ್ ಎಸೆದ ವಹಾಬ್ ಗಾಯಗೊಂಡು ಕ್ರೀಡಾಂಗಣದಿಂದ ಹೊರ ನಡೆದರು. ಬ್ಯಾಟಿಂಗ್ ವೇಳೆಯಲ್ಲೂ ಅವರು ಕಣಕ್ಕಿಳಿಯಲಿಲ್ಲ. ಹೀಗಾಗಿ ಪಾಕಿಸ್ತಾನ ಇನ್ನೂ ಒಂದು ವಿಕೆಟ್ ಬಾಕಿ ಇರುವಂತೆಯೇ ಸೋಲೊಪ್ಪಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


