ಭಾರತ-ಪಾಕ್ ನಡುವೆ ಹೈ ವೋಲ್ಟೇಜ್ ಪಂದ್ಯ: ಕೊಹ್ಲಿ ಟೀಂ ಗೆ ಯೋಧರಿಂದ ಶುಭ ಹಾರೈಕೆ
ಬರ್ನಿಂಗ್ ಹ್ಯಾಮ್ ನಲ್ಲಿ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು, ಕೊಹ್ಲಿ ಟೀಂ ಗೆ ಭಾರತೀಯ ಸೇನೆ ಶುಭ ಹಾರೈಸಿದೆ.

Published On :
ಜಮ್ಮು: ಬರ್ಮಿಂಗ್ ಹ್ಯಾಮ್ ನಲ್ಲಿ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು, ಕೊಹ್ಲಿ ಟೀಂ ಗೆ ಭಾರತೀಯ ಸೇನೆ ಶುಭ ಹಾರೈಸಿದೆ.
ಜಮ್ಮು-ಕಾಶ್ಮೀರದ ಯೋಧರು ಭಾರತೀಯ ತಂಡಕ್ಕೆ ಶುಭ ಹಾರೈಕೆಯ ಸಂದೇಶ ಕಳಿಸಿದ್ದು, ಭಾರತೀಯ ತಂಡ ಪಂದ್ಯದಲ್ಲಿ ಜಯಗಳಿಸಲಿದೆ ಎಂದು ಸೇನೆ ವಿಶ್ವಾಸ ವ್ಯಕ್ತಪಡಿಸಿದೆ. "ಹಮ್ ಹಿಂದೂಸ್ಥಾನಿ ಹಮ್ ಹಿಂದೂಸ್ಥಾನಿ", "ಸುನೊ ಗೌರ್ ಸೆ ದುನಿಯಾ ವಾಲೊ, ಬುರಿ ನಜರ್ ನ ಹಂಪೆ ದೌಲೊ" ಹಾಡು ಹಾಡುವ ಮೂಲಕ ಭಾರತೀಯ ಸೇನೆಯ ಯೋಧರು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.
ಭಾರತದ ಗಡಿಯಲ್ಲಿ ಪಾಕಿಸ್ತಾನದ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವೂ ಹಾಳಾಗಿದೆ. ಈ ಹಿಂದೆ ಹಲವು ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದೇವೆ, ಈ ಬಾರಿಯೂ ಪಾಕಿಸ್ತಾನ ಸೋಲಲಿದೆ, ಪಂದ್ಯ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಬಿಎಸ್ ಎಫ್ ಯೋಧರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಭಾರತೀಯ ಸೇನೆChampions Trophy 2017ಚಾಂಪಿಯನ್ಸ್ ಟ್ರೋಫಿ 2017India Pakistan matchಭಾರತ ಪಾಕಿಸ್ತಾನ ಪಂದ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


