ಐಸಿಸಿ ಟೆಸ್ಟ್ ಶ್ರೇಣಿ: ಜಡೇಜಾ ಟಾಪ್, 2ನೇ ಸ್ಥಾನಕ್ಕೇರಿದ ಅಶ್ವಿನ್
ಆ.1 ರಂದು ಐಸಿಸಿ ಟೆಸ್ಟ್ ಶ್ರೇಣಿ ಬಿಡುಗಡೆಗೊಂಡಿದ್ದು, ಬೌಲಿಂಗ್ ವಿಭಾಗದಲ್ಲಿ ಟಾಪ್ ನಲ್ಲಿದ್ದ ಜಡೇಜಾ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಅಶ್ವಿನ್ 2 ನೇ ಸ್ಥಾನಕ್ಕೇರಿದ್ದಾರೆ.

Published On :
ಆ.1 ರಂದು ಐಸಿಸಿ ಟೆಸ್ಟ್ ಶ್ರೇಣಿ ಬಿಡುಗಡೆಗೊಂಡಿದ್ದು, ಬೌಲಿಂಗ್ ವಿಭಾಗದಲ್ಲಿ ಟಾಪ್ ನಲ್ಲಿದ್ದ ಜಡೇಜಾ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಅಶ್ವಿನ್ 2 ನೇ ಸ್ಥಾನಕ್ಕೇರಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೋಹ್ಲಿ 5 ನೇ ಸ್ಥಾನದಲ್ಲಿದ್ದು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರೆ, 4 ನೇ ಸ್ಥಾನದಲ್ಲಿರುವ ಚೇತಶ್ವರ ಪೂಜಾರ ಭಾರತದ ಟಾಪ್ ಶ್ರೇಣಿಯಲ್ಲಿರುವ ಬ್ಯಾಟ್ಸ್ ಮನ್ ಎನಿಸಿದ್ದಾರೆ. ಇನ್ನು ಪ್ರಾರಂಭಿಕ ಆಟಗಾರ ಶಿಖರ್ ಧವನ್ 39 ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ನ ಜೋ ರೂಟ್ ಹಾಗೂ ನ್ಯೂ ಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್ ಅನುಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಶ್ರೀಲಂಕಾ ತಂಡದ ಸ್ಪಿನ್ ಬೌಲರ್ ರಂಗನಾ ಹೆರಾತ್ ಅವರನ್ನು ಹಿಂದಿಕ್ಕಿದ್ದು, ರಂಗನಾ ಹೆರಾತ್ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತVirat KohliRavindra JadejaAshwinರವೀಂದ್ರ ಜಡೇಜಅಶ್ವಿನ್ICC Test rankingsವಿರಾಟ್ ಕೋಹ್ಲಿಐಸಿಸಿ ಟೆಸ್ಟ್ ಶ್ರೇಣಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


