ಕ್ರಿಕೆಟ್

ನೋಯ್ಡಾದಲ್ಲಿ ಭಾರತೀಯ ಕ್ರಿಕೆಟಿಗನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಭಾರತಿಯ ಕ್ರಿಕೆಟಿಗ ದೆಹಲಿ ವೇಗದ ಬೌಲರ್‌ ಪರ್ವೀಂದರ್‌ ಅವಾನಾ ಮೇಲೆ ಐವರು ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ...

ನೋಯ್ಡಾದಲ್ಲಿ ಭಾರತೀಯ ಕ್ರಿಕೆಟಿಗನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಪರ್ವೀಂದರ್‌ ಅವಾನಾ
Published On :
ಗ್ರೇಟರ್‌ ನೋಯ್ಡಾ:  ಭಾರತಿಯ ಕ್ರಿಕೆಟಿಗ ದೆಹಲಿ ವೇಗದ ಬೌಲರ್‌ ಪರ್ವೀಂದರ್‌ ಅವಾನಾ ಮೇಲೆ ಐವರು ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ.
ಹರಿದ್ವಾರದ ಮನೆಯಿಂದ ಕಾಸ್ನಾ ಸೈಟ್-4 ಗೆ ಮರಳುತ್ತಿರುವ ವೇಳೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಪರ್ವಿಂದರ್ ಅವರ ಎಕ್ಸ್ ಯುವಿ  ಕಾರು ದಾಳಿಯಿಂದ ಹಾನಿಗೊಳಗಾಗಿದೆ. ಹಲ್ಲೆ ನಡೆಸಿದವರು ಗಂಗೋಳ ಗ್ರಾಮದವರು ಎಂದು ಹೇಳಲಾಗಿದೆ. 
ಯಾವ ಕಾರಣಕ್ಕಾಗಿ ಅವರ ಮೇಲೆ ದಾಳಿ ನಡೆಸಲಾಗಿದೆ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.
2012ರಲ್ಲಿ ಇಂಗ್ಲೆಂಡ್‌ ವಿರುದ್ಧದ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ ಪಂದ್ಯಕ್ಕೆ ಪರ್ವಿಂದರ್‌ ಅವಾನಾ ಆಯ್ಕೆಯಾಗಿದ್ದರು. ತದನಂತರ 2016ರಲ್ಲಿ ಇವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್ ತಂಡದ ಪರ ಆಟವಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.