8 ವರ್ಷಗಳ ನಂತರ ಶ್ರೀಲಂಕಾ ಜತೆ ಟೀಂ ಇಂಡಿಯಾ ಪೂರ್ಣ ಪ್ರಮಾಣದ ಸರಣಿ!
ಟೀಂ ಇಂಡಿಯಾ ಎಂಟು ವರ್ಷಗಳ ಬಳಿಕ ಶ್ರೀಲಂಕಾ ಜತೆ ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರು ಮಾದರಿಯಲ್ಲೂ ಸರಣಿಗಳನ್ನು ಆಡಲಿದೆ...

Published On :
ಕೊಲಂಬೋ: ಟೀಂ ಇಂಡಿಯಾ ಎಂಟು ವರ್ಷಗಳ ಬಳಿಕ ಶ್ರೀಲಂಕಾ ಜತೆ ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರು ಮಾದರಿಯಲ್ಲೂ ಸರಣಿಗಳನ್ನು ಆಡಲಿದೆ.
ಟೀಂ ಇಂಡಿಯಾ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜುಲೈ 26ರಂದು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ನಂತರ ಕೊಲಂಬೋ ಮತ್ತು ಕ್ಯಾಂಡಿಯಲ್ಲಿ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳು ಆಗಸ್ಟ್ ನಲ್ಲಿ ನಡೆಯಲಿದೆ.
ಆಗಸ್ಟ್ 20ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಮೊದಲ ಏಕದಿನ ಪಂದ್ಯ ಡಮ್ಬುಲ್ಲಾದಲ್ಲಿ ನಡೆಯಲಿದೆ. ನಂತರದ ಪಂದ್ಯಗಳು ಕ್ಯಾಂಡಿ ಮತ್ತು ಕೊಲಂಬೋದಲ್ಲಿ ನಡೆಯಲಿದೆ.
ಇನ್ನು ಭಾರತ ವಿರುದ್ಧ ಶ್ರೀಲಂಕಾ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದೆ. ಕೊಲಂಬೋದ ಪ್ರೇಮದಾಸ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 6ರಂದು ನಡೆಯಲಿದೆ.
ಟೆಸ್ಟ್ ಸರಣಿಯ ವೇಳಾಪಟ್ಟಿ
* ಮೊದಲ ಟೆಸ್ಟ್: ಜುಲೈ 26, ಗಾಲೆ ಮೈದಾನ.
* ದ್ವಿತೀಯ ಟೆಸ್ಟ್: ಆಗಸ್ಟ್ 3, ಕೊಲಂಬೋ
* ತೃತೀಯ ಟೆಸ್ಟ್: ಆಗಸ್ಟ್ 12, ಕ್ಯಾಂಡಿ
ಏಕದಿನ ಸರಣಿಯ ವೇಳಾಪಟ್ಟಿ
* ಮೊದಲ ಏಕದಿನ ಪಂದ್ಯ: ಆಗಸ್ಟ್ 20, ಡಮ್ಬುಲ್ಲಾ
* ದ್ವಿತೀಯ ಏಕದಿನ ಪಂದ್ಯ: ಆಗಸ್ಟ್ 24, ಕ್ಯಾಂಡಿ
* ತೃತೀಯ ಏಕದಿನ ಪಂದ್ಯ: ಆಗಸ್ಟ್ 27, ಕ್ಯಾಂಡಿ
* ನಾಲ್ಕನೇ ಏಕದಿನ ಪಂದ್ಯ: ಆಗಸ್ಟ್ 31, ಕೊಲಂಬೋ
* ಐದನೇ ಏಕದಿನ ಪಂದ್ಯ: ಸೆಪ್ಟೆಂಬರ್ 3, ಕೊಲಂಬೋ
* ಟಿ20 ಪಂದ್ಯ: ಸೆಪ್ಟೆಂಬರ್ 7, ಕೊಲಂಬೋ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


