ರಾಷ್ಟ್ರಗೀತೆ ವೇಳೆ ಚೂಯಿಂಗ್ ಗಮ್ ಜಗಿದು ಪರ್ವೇಜ್ ರಸೂಲ್ ಅಗೌರವ
ಟೀಂ ಇಂಡಿಯಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಜಮ್ಮ ಮತ್ತು ಕಾಶ್ಮೀರದ ಆಟಗಾರ ಪರ್ವೇಜ್ ರಸೂಲ್ ರಾಷ್ಟ್ರಗೀತೆ ಗಾಯನದ ವೇಳೆ ಚೂಯಿಂಗ್...

Published On :
ಕಾನ್ಪುರ: ಟೀಂ ಇಂಡಿಯಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಜಮ್ಮ ಮತ್ತು ಕಾಶ್ಮೀರದ ಆಟಗಾರ ಪರ್ವೇಜ್ ರಸೂಲ್ ರಾಷ್ಟ್ರಗೀತೆ ಗಾಯನದ ವೇಳೆ ಚೂಯಿಂಗ್ ಗಮ್ ಜಗಿದು ಅಸಭ್ಯ ವರ್ತನೆ ತೋರಿದ್ದಾರೆ.
ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಗಾಯನದ ವೇಳೆ ಇತರ ಆಟಗಾರರು ಹಾಡಿ ಗೌರವ ಸಲ್ಲಿಸುತ್ತಿದ್ದರೆ ರಸೂಲ್ ಬಾಯಲ್ಲಿ ಚೂಯಿಂಗ್ ಗಮ್ ಜಗಿಯುತ್ತಿದ್ದರು. ಪಂದ್ಯದ ನೇರ ಪ್ರಸಾರವನ್ನು ಮಾಡುತ್ತಿದ್ದ ಚಾನೆಲ್ ನಲ್ಲೂ ಈ ದೃಶ್ಯ ಪ್ರಸಾರಗೊಂಡಿತ್ತು. ರಸೂಲ್ ತಮ್ಮ ಅಸಭ್ಯ ವರ್ತನೆಯಿಂದ ಇದೀಗ ಟೀಕಾಕಾರರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ದೇಶಾದ್ಯಂತ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಜನ ಗಣ ಮನ ಎಂದು ಜಪಿಸುತ್ತಿದ್ದರೇ ರಸೂಲ್ ಮಾತ್ರ ರಾಷ್ಟ್ರಗೀತೆ ವೇಳೆ ಚೂಯಿಂಗ್ ಗಮ್ ಜಗಿದು ಸಿಕ್ಕಿಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರ ಟೀಕೆಗೆ ಗುರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam Indiaಇಂಗ್ಲೆಂಡ್Englandnational anthemರಾಷ್ಟ್ರಗೀತೆParvez RasoolChewing gumಪರ್ವೇಜ್ ರಸೂಲ್ಚೂಯಿಂಗ್ ಗಮ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


