ಧೋನಿಯನ್ನು ನಾನು ಕ್ಷಮಿಸಿದ್ದೇನೆ, ಉಳಿದದ್ದು ದೇವರಿಗೆ ಬಿಟ್ಟದ್ದು: ಯೋಗರಾಜ್ ಸಿಂಗ್
ಮಹೇಂದ್ರ ಸಿಂಗ್ ಧೋನಿಯನ್ನು ನಾನು ಕ್ಷಮಿಸಿದ್ದೇನೆ, ನನ್ನ ಮಗನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ದೇವರು ಕೂಡ ಆತನನ್ನು ಕ್ಷಮಿಸಬಹುದು ಎಂದು ಕ್ರಿಕೆಟಿಗ..

ನವದೆಹಲಿ: ಮಹೇಂದ್ರ ಸಿಂಗ್ ಧೋನಿಯನ್ನು ನಾನು ಕ್ಷಮಿಸಿದ್ದೇನೆ, ನನ್ನ ಮಗನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ದೇವರು ಕೂಡ ಆತನನ್ನು ಕ್ಷಮಿಸಬಹುದು ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ಯುವರಾಜ್ ಸಿಂಗ್ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತ ಪಡಿಸಿರುವ ಅವರ ತಂದೆ ಯೋಗರಾಜ್ ಸಿಂಗ್ ಸದಾ ದೋನಿ ನಡೆಯ ಬಗ್ಗೆ ಟೀಕಿಸುತ್ತಿದ್ದರು.
ನಾನು ಧೋನಿಯನ್ನು ಕ್ಷಮಿಸಿದ್ದೇನೆ, ಆತ ಮಾಡಿರುವ ಕೆಡುಕುಗಳ ಬಗ್ಗೆ ದೇವರು ನೋಡಿಕೊಳ್ಳುತ್ತಾನೆ ಎಂದು ಯೋಗರಾಜ್ ಸಿಂಗ್ ತಿಳಿಸಿದ್ದಾರೆ. ಧೋನಿ ತಪ್ಪು ಮಾಡಿದ್ದ ನಂತರ, ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಕ್ಷಮೆ ಕೇಳಿದ್ದ ಎಂದು ಅವರು ತಿಳಿಸಿದ್ದಾರೆ.
ಧೋನಿ ನನ್ನ ಮಗನ ಮೂರು ವರ್ಷದ ವೃತ್ತಿ ಬದುಕನ್ನು ಹಾಳು ಮಾಡಿದ. ಇದನ್ನು ಆತ ಅರ್ಥ ಮಾಡಿಕೊಂಡು ದೇವರ ಬಳಿ ಕ್ಷಮೆ ಕೋರಬೇಕು.ನನಗೆ ಹಾಗೂ ನನ್ನ ಮಕ್ಕಳಿಗೆ ಕೆಡುಕು ಮಾಡಿದವರನ್ನು ನಾನು ಯಾವಾಗಲು ಕ್ಷಮಿಸುತ್ತೇನೆ, ದೇವರು ದೊಡ್ಡವನು ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


