2016 ರಲ್ಲಿ ಧೋನಿ, ವಿರಾಟ್ ಕೋಹ್ಲಿ ಗಳಿಸಿದ ಆದಾಯ ಎಷ್ಟು ಗೊತ್ತಾ?
2016 ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಖ್ಯಾತನಾಮರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೋಹ್ಲಿ ಸ್ಥಾನ ಪಡೆದಿದ್ದಾರೆ.

Published On :
ನವದೆಹಲಿ: 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೋಹ್ಲಿ ತಮ್ಮ ನಾಯಕತ್ವ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಅದರೊಂದಿಗೆ ಈ ಇಬ್ಬರು ಆಟಗಾರರು ಮತ್ತೊಂದು ಸಾಧನೆ ಮಾಡಿದ್ದು, 2016 ರಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಖ್ಯಾತನಾಮರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಇಂಡಿಯಾ 2016 ನೇ ಸಾಲಿನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಖ್ಯಾತನಾಮರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಿರಾಟ್ ಕೋಹ್ಲಿ 3ನೇ ಸ್ಥಾನ ಗಳಿಸಿದ್ದರೆ ಎಂಎಸ್ ಧೋನಿ 5 ನೇ ಸ್ಥಾನದಲ್ಲಿದ್ದಾರೆ. 2016 ರಲ್ಲಿ ವಿರಾಟ್ ಕೋಹ್ಲಿ ಗಳಿಸಿದ ಒಟ್ಟು ಆದಾಯ 134.44 ಕೋಟಿಯಾಗಿದ್ದು, ಟೆಸ್ಟ್ ನಲ್ಲಿ 1,000 ರನ್, 3 ದ್ವಿಶತಕಗಳನ್ನು ಪೂರೈಸಿದ್ದಾರೆ.
ಇನ್ನು 2016 ರಲ್ಲಿ ಎಂಎಸ್ ಧೋನಿ ಗಳಿಸಿದ ಆದಾಯ 122.48 ಕೋಟಿಯಾಗಿದ್ದು, ಅತ್ಯಂತ ಪ್ರಸಿದ್ಧ ವ್ಯಕ್ತಿಗಳ ಸಾಲಿನಲ್ಲಿ 4 ನೇ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


