ಕ್ರಿಕೆಟ್ ಆಟ ಸುಧಾರಿಸಿಕೊಳ್ಳಿ, ಇಲ್ಲವೇ ಮನೆಯಲ್ಲಿರಿ: ಪಾಕ್ ತಂಡಕ್ಕೆ ಆಯಾನ್ ಚಾಪೆಲ್
ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 220 ರನ್ ಗಳಿಂದ ಸೋಲನುಭವಿಸಿದ ಹಿನ್ನೆಲೆಯಲ್ಲಿ ಆಟವನ್ನು ಸುಧಾರಿಸಿಕೊಳ್ಳಿ ಇಲ್ಲವೇ ...

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 220 ರನ್ ಗಳಿಂದ ಸೋಲನುಭವಿಸಿದ ಹಿನ್ನೆಲೆಯಲ್ಲಿ ಆಟವನ್ನು ಸುಧಾರಿಸಿಕೊಳ್ಳಿ ಇಲ್ಲವೇ ಮನೆಯಲ್ಲಿರಿ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಆಯಾನ್ ಚಾಪೆಲ್ ಟೀಕಿಸಿದ್ದಾರೆ.
ಆಸ್ಟ್ರೇಲಿಯಾ ಜೊತೆ ನಡೆದ ಮೂರು ಸರಣಿಗಳಲ್ಲಿ ಪಾಕ್ ಕ್ರಿಕೆಟ್ ತಂಡದ ಸೋಲನುಭವಿಸಿತ್ತು.ಆಟವನ್ನು ಸುಧಾರಿಸಿಕೊಳ್ಳಿ ಇಲ್ಲವೇ ನಿಮ್ಮ ತಂಡದ ಜೊತೆ ಮನೆಯಲ್ಲಿರಿ ಎಂದು ಪಾಕ್ ತಂಡದ ನಾಯಕ ಮಿಶಬ್ ಉಲ್ ಹಕ್ ಅವರಿಗೆ 73 ವರ್ಷದ ಐಯಾನ್ ಚಾಪೆಲ್ ಹೇಳಿದ್ದಾರೆ.
ಪಾಕಿಸ್ತಾನ ತಂಡ ತಮ್ಮ ಆಟವನ್ನು ಸುಧಾರಿಸಿಕೊಳ್ಳುವರೆಗೂ ಪಾಕ್ ತಂಡವನ್ನು ಯಾವುದೇ ಪಂದ್ಯಕ್ಕೆ ಆಹ್ವಾನಿಸಿಬಾರದು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪಾಕ್ ಕ್ರಿಕೆಟ್ ತಂಡ 12 ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ. ನಾಯಕ ಮಿಶಬ್ ಕಡೆಯಿಂದ ತಂಡಕ್ಕೆ ಯಾವುದೇ ಸ್ಫೂರ್ತಿಯಿಲ್ಲ, ಹೀಗಾಗಿ ನಾಯಕತ್ವನ್ನು ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


